3ನೇ ದೊಡ್ಡ ಬ್ಯಾಂಕ್‌ ಬಿಒಬಿ

ಗುರುವಾರ , ಏಪ್ರಿಲ್ 25, 2019
21 °C
ರಿಟೇಲ್‌, ಎಂಎಸ್‌ಎಂಇ ವಲಯಗಳಿಗೆ ಆದ್ಯತೆ: ಬಿರೇಂದ್ರ ಕುಮಾರ್‌

3ನೇ ದೊಡ್ಡ ಬ್ಯಾಂಕ್‌ ಬಿಒಬಿ

Published:
Updated:
Prajavani

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಎರಡನೇ ಮತ್ತು ದೇಶದ ಮೂರನೇ ಅತಿದೊಡ್ಡ ಬ್ಯಾಂಕ್‌ ‘ಬ್ಯಾಂಕ್‌ ಆಫ್‌ ಬರೋಡಾ’ (ಬಿಒಬಿ) ಸೋಮವಾರದಿಂದ ಕಾರ್ಯಾರಂಭ ಮಾಡಿದೆ.

‘ರಿಟೇಲ್‌, ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕಾ ವಲಯಗಳಿಗೆ ಸಾಲ ನೀಡುವ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು’ ಎಂದು ಬ್ಯಾಂಕ್‌ನ ಜನರಲ್‌ ಮ್ಯಾನೇಜರ್‌ ಬಿರೇಂದ್ರ ಕುಮಾರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್‌ ಸೇವೆಗಳು ಮತ್ತು ನಗದು ನಿರ್ವಹಣೆ ಪರಿಹಾರ, ಹಣಕಾಸು ಯೋಜನೆಗಳು, ಸಂಪತ್ತು ನಿರ್ವಹಣಾ ಸೇವೆಗಳಂತಹ ವೈವಿಧ್ಯಮಯವಾದ ಉತ್ಪನ್ನಗಳ ಪ್ರಯೋಜನಗಳು ಸಿಗಲಿವೆ.

‘ವಿಲೀನದಿಂದ ಉದ್ಯೋಗಿಗಳಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅವರ ಹಿತರಕ್ಷಣೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಉತ್ತಮವಾದ ಮಾನವ ಸಂಪನ್ಮೂಲ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುವುದು. ಉದ್ಯೋಗಿಗಳ ವೃತ್ತಿಪರತೆಯಲ್ಲಿ ಇನ್ನಷ್ಟು ಸುಧಾರಣೆ ಕಂಡುಬರಲಿದೆ’ ಎಂದು ಅವರು ಹೇಳಿದರು.

ಎನ್‌ಪಿಎ ಮೇಲೆ ಕನಿಷ್ಠ ಪರಿಣಾಮ (ಮುಂಬೈ ವರದಿ): ವಿಲೀನದ ಫಲವಾಗಿ ಬ್ಯಾಂಕ್‌ನ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣದ ಮೇಲೆ ಕನಿಷ್ಠ ಪರಿಣಾಮ ಕಂಡು ಬರಲಿದೆ ಎಂದು ‘ಬಿಒಬಿ’ ತಿಳಿಸಿದೆ.

‘ಡಿಸೆಂಬರ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ‘ಎನ್‌ಪಿಎ’  (₹ 19 ಸಾವಿರ ಕೋಟಿ) ಶೇ 4.26ರಷ್ಟಿತ್ತು. ದೇನಾ ಬ್ಯಾಂಕ್‌ನ ‘ಎನ್‌ಪಿಎ’ ಗರಿಷ್ಠ ಪ್ರಮಾಣದಲ್ಲಿ ಇತ್ತು. ವಿಲೀನದ ನಂತರ ಇದು (₹ 30 ಸಾವಿರ ಕೋಟಿ) ಶೇ 4.80ಕ್ಕಷ್ಟೆ ಹೆಚ್ಚಳಗೊಳ್ಳಲಿದೆ. ಎರಡು ತ್ರೈಮಾಸಿಕಗಳಲ್ಲಿ ಇದನ್ನು ಕಡಿಮೆ ಮಾಡಲಾಗುವುದು’ ಎಂದು ಬ್ಯಾಂಕ್‌ನ ಸಿಇಒ ಪಿ. ಎಸ್‌. ಜಯಕುಮಾರ್‌ ಅವರು ಹೇಳಿದ್ದಾರೆ.

ಬ್ಯಾಂಕ್‌ಗಳ ಹೊಣೆಗಾರಿಕೆ ಬದಲು
ಮುಂಬೈ
: ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳು ಬ್ಯಾಂಕ್‌ ಆಫ್‌ ಬರೋಡಾದಲ್ಲಿ (ಬಿಒಬಿ) ವಿಲೀನಗೊಂಡಿರುವುದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌, ಈ ಮಾರ್ಗದರ್ಶಿ ಬ್ಯಾಂಕ್‌ಗಳ ಹೊಣೆಗಾರಿಕೆಯಲ್ಲಿ ಪುನರ್‌ ಹೊಂದಾಣಿಕೆ ಮಾಡಿದೆ.

ಕರ್ನಾಟಕ, ಗುಜರಾತ್‌ ಮತ್ತು ಛತ್ತೀಸಗಡ ರಾಜ್ಯಗಳ ಕೆಲ ಜಿಲ್ಲೆಗಳಲ್ಲಿನ ಮಾರ್ಗದರ್ಶಿ ಬ್ಯಾಂಕ್‌ ಹೊಣೆಗಾರಿಕೆಯನ್ನು ಬದಲಿಸಲಾಗಿದೆ. ಕರ್ನಾಟಕದಲ್ಲಿ ಮೂರು ಜಿಲ್ಲೆಗಳ ಹೊಣೆಗಾರಿಕೆಯನ್ನು ಈಗ ವಿಜಯ ಬ್ಯಾಂಕ್‌ನಿಂದ ಬ್ಯಾಂಕ್‌ ಆಫ್‌ ಬರೋಡಾಗೆ ವರ್ಗಾಯಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !