ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳ ಸಾಲ ನೀಡಿಕೆ, ಠೇವಣಿ ಸಂಗ್ರಹ ಹೆಚ್ಚಳ

Last Updated 8 ಮೇ 2021, 10:24 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ಗಳು ನೀಡಿರುವ ಸಾಲದ ಮೊತ್ತ ಹಾಗೂ ಸಂಗ್ರಹಿಸಿರುವ ಠೇವಣಿ ಮೊತ್ತವು ಏಪ್ರಿಲ್‌ 23ಕ್ಕೆ ಕೊನೆಗೊಂಡ 15 ದಿನಗಳ ಅವಧಿಯಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

ಈ 15 ದಿನಗಳ ಅವಧಿಯಲ್ಲಿ ಬ್ಯಾಂಕ್‌ಗಳು ನೀಡಿರುವ ಸಾಲದ ಪ್ರಮಾಣ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 5.71ರಷ್ಟು ಹೆಚ್ಚಾಗಿ ₹ 108.60 ಲಕ್ಷ ಕೋಟಿಗಳಿಗೆ ತಲುಪಿದೆ. ಠೇವಣಿ ಸಂಗ್ರಹವು ಶೇ 10.28ರಷ್ಟು ಹೆಚ್ಚಾಗಿ ₹ 151.34 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

2020ರ ಏಪ್ರಿಲ್‌ 24ಕ್ಕೆ ಕೊನೆಗೊಂಡ 15 ದಿನಗಳ ಅವಧಿಯಲ್ಲಿ ಬ್ಯಾಂಕ್‌ ಸಾಲ ₹ 102.73 ಲಕ್ಷ ಕೋಟಿ ಮತ್ತು ಠೇವಣಿಯು ₹ 137.23 ಲಕ್ಷ ಕೋಟಿಗಳಷ್ಟಿತ್ತು.

2020–21ನೇ ಹಣಕಾಸು ವರ್ಷದ ಅಂತ್ಯಕ್ಕೆ ಬ್ಯಾಂಕ್‌ಗಳ ಸಾಲ ನೀಡಿಕೆಯು ಶೇ 5.56ರಷ್ಟು ಮತ್ತು ಠೇವಣಿ ಸಂಗ್ರಹವು ಶೇ 11.4ರಷ್ಟು ಬೆಳವಣಿಗೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT