ಮುಂಬೈ: ಪ್ರಸಕ್ತ ವರ್ಷದ ಜನವರಿ 31ರ ವೇಳೆಗೆ ಬ್ಯಾಂಕ್ಗಳ ಸಾಲ ನೀಡಿಕೆ ಪ್ರಮಾಣವು ಶೇ 14.41ಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿದೆ.

ಜಿಎಸ್ಟಿ ದರ ಸರಳೀಕರಣದ ಬಳಿಕ ಬ್ಯಾಂಕ್ಗಳ ಸಾಲದ ಬೆಳವಣಿಗೆ ದರ ವಿಸ್ತರಣೆ ಆಗಿದೆ. ರಿಟೇಲ್ ಮತ್ತು ಕಾರ್ಪೊರೇಟ್ ಕಂಪನಿಗಳ ಸಾಲ ತೆಗೆದುಕೊಳ್ಳುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಬ್ಯಾಂಕ್ಗಳ ಸಾಲ ನೀಡಿಕೆ ಪ್ರಮಾಣ ಶೇ 9.98ರಷ್ಟಿತ್ತು. ಆಗಸ್ಟ್ನಲ್ಲಿ ಶೇ 10 ದಾಟಿತ್ತು. ಸೆಪ್ಟೆಂಬರ್ನಲ್ಲಿ ಜಿಎಸ್ಟಿ ಮಂಡಳಿಯು ಜಿಎಸ್ಟಿ ದರ ಪರಿಷ್ಕರಣೆ ಮಾಡಿತು. ಇದು ವ್ಯಾಪಾರಕ್ಕೆ ಉತ್ತೇಜನ ನೀಡಿದ್ದು, ಸಾಲದ ನೀಡಿಕೆಯು ಶೇ 10.29ಕ್ಕೆ ತಲುಪಿತು.

ಹಬ್ಬದ ಬೇಡಿಕೆ, ರಿಟೇಲ್ ಸಾಲದ ಹೆಚ್ಚಳ ಮತ್ತು ವ್ಯಾಪಾರಕ್ಕೆ ನೀಡುವ ಸಾಲದಲ್ಲಿನ ಏರಿಕೆಯಿಂದ ಅಕ್ಟೋಬರ್ ಮತ್ತು ನವೆಂಬರ್ಲ್ಲಿ ಇದು ಶೇ 11.4ಕ್ಕೆ ಏರಿಕೆ ಆಯಿತು. ಇದೇ ಪ್ರವೃತ್ತಿ ಡಿಸೆಂಬರ್ನಲ್ಲೂ ಮುಂದುವರಿಯಿತು. ಡಿಸೆಂಬರ್ 31ರ ವೇಳೆಗೆ ಸಾಲದ ಬೆಳವಣಿಗೆ ದರ ಶೇ 14.39ಕ್ಕೆ ತಲುಪಿತು. ಜನವರಿ ಅಂತ್ಯದ ವೇಳೆಗೆ ಶೇ 14.41ಕ್ಕೆ ತಲುಪಿತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.