ಬೆಂಗಳೂರು: ಬಾರ್ಬೆಕ್ಯೂ ನೇಷನ್ ತನ್ನ ರೆಸ್ಟೋರೆಂಟ್‌ಗಳಲ್ಲಿ ಇತ್ತೀಚೆಗೆ ರಂಜಾನ್ ಎಕ್ಸ್ ಟ್ರಾವಾಗಂಜಾ ಆಹಾರ ಉತ್ಸವದ ಭಾಗವಾಗಿ ಬೆಂಗಳೂರು ಸೇರಿ ದೇಶದ ಐದು ಮಹಾನಗರಗಳಲ್ಲಿ ಬಡ ಮಕ್ಕಳಿಗೆ ಇಫ್ತಾರ್ ಕೂಟವನ್ನು ಆಯೋಜಿಸಿತ್ತು.

ಪಾಲುದಾರ ಎನ್‌ಜಿಒಗಳಾದ ಹೋಪ್ ಫಾರ್ ಲೈಫ್ ಫೌಂಡೇಶನ್ ಮತ್ತು ಬೆಂಗಳೂರಿನ ಬಿಲ್ಡಿಂಗ್ ಬ್ಲಾಕ್ಸ್ ಇಂಡಿಯಾ, ಮುಂಬೈ ಮತ್ತು ಕೋಲ್ಕತ್ತದಲ್ಲಿರುವ ರಾಬಿನ್ ಹುಡ್ ಆರ್ಮಿ, ನವದೆಹಲಿಯ ಖುಷಿಯಾನ್ ಮತ್ತು ಹೈದರಾಬಾದ್‌ನಲ್ಲಿರುವ ಹೋಪ್ ಫಾರ್ ಲೈಫ್ ಫೌಂಡೇಶನ್‌ನಿಂದ ಬಾರ್ಬೆಕ್ ನೇಷನ್ ರೆಸ್ಟೋರೆಂಟ್‌ಗಳಲ್ಲಿ 200ಕ್ಕೂ ಹೆಚ್ಚು ಮಕ್ಕಳಿಗೆ ಇಫ್ತಾರ್ ಆತಿಥ್ಯ ನೀಡಿತು.

ಬಾರ್ಬೆಕ್ಯೂ ನೇಷನ್ ಹಾಸ್ಪಿಟಾಲಿಟಿ ಲಿಮಿಟೆಡ್‌ನ ಸಿಇಒ ರಾಹುಲ್ ಅಗ್ರವಾಲ್, ರಂಜಾನ್ ಏಕತೆ, ಸಹಾನುಭೂತಿ ಮತ್ತು ಅಂತರ್ಗತತೆಯನ್ನು ಪೋಷಿಸುತ್ತದೆ. ಮಕ್ಕಳೊಂದಿಗೆ ಇಫ್ತಾರ್ ಊಟ ಎಂದರೆ ಸಮುದಾಯವನ್ನು ಒಟ್ಟುಗೂಡಿಸುವುದು ಮತ್ತು ಸಂತೋಷವನ್ನು ಹರಡುವುದು ಎಂದರ್ಥ ಎಂದು ಹೇಳಿದ್ದಾರೆ.

ಇದು ಈ ಮಕ್ಕಳ ಹೃದಯವನ್ನು ಸ್ಪರ್ಶಿಸುವುದಲ್ಲದೆ ಆಹಾರ, ವಿನೋದ ಮತ್ತು ಸಂಗೀತದಿಂದ ತುಂಬಿದ ಅನುಭವವನ್ನು ಹಂಚಿಕೊಳ್ಳುವ ಮೂಲಕ ಹೊಸ ಸಂಪರ್ಕವನ್ನು ಬೆಸೆಯುತ್ತದೆ. ಔದಾರ್ಯ, ಸಹಾನುಭೂತಿ ಮತ್ತು ಕೋಮು ಸೌಹಾರ್ದದ ಆಶಯವನ್ನು ಸಾಕಾರಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಬಾರ್ಬೆಕ್ಯೂ ನೇಷನ್ 2006ರಲ್ಲಿ ಮುಂಬೈನಲ್ಲಿ ಪ್ರಾರಂಭವಾಗಿದ್ದು, ದೇಶ ಮತ್ತು ವಿದೇಶಗಳಲ್ಲಿ 194 ಮಳಿಗೆಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.