ಮುಂಬೈ: ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಜಿಗಿದಿವೆ. ದಿನದ ವಹಿವಾಟಿನ ನಡುವಿನಲ್ಲಿ 46,992ಕ್ಕೆ ತಲುಪಿದ್ದ ಸೆನ್ಸೆಕ್ಸ್, ದಿನದ ಕೊನೆಯಲ್ಲಿ 46,890 ಅಂಶಗಳಿಗೆ ವಹಿವಾಟು ಅಂತ್ಯಗೊಳಿಸಿತು. ಸೆನ್ಸೆಕ್ಸ್ ಈ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿದ್ದು ಸಾರ್ವಕಾಲಿಕ ದಾಖಲೆ.

ನಿಫ್ಟಿ 58 ಅಂಶಗಳಷ್ಟು ಚೇತರಿಕೆ ಕಂಡು, 13,740 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಎಚ್ಡಿಎಫ್ಸಿ ಷೇರುಗಳು ಶೇಕಡ 2.92ರಷ್ಟು ಏರಿಕೆ ಕಂಡವು. ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಪವರ್ಗ್ರಿಡ್, ಟಿಸಿಎಸ್, ಟೆಕ್ ಮಹೀಂದ್ರ ಹಾಗೂ ಎಲ್ಆ್ಯಂಡ್ಟಿ ಕಂಪನಿಯ ಷೇರುಗಳೂ ಉತ್ತಮ ಗಳಿಕೆ ಕಂಡುಕೊಂಡವು.

ಒಎನ್ಜಿಸಿ, ಮಾರುತಿ, ಟಾಟಾ ಸ್ಟೀಲ್, ಎಚ್ಯುಎಲ್, ಬಜಾಜ್ ಆಟೊ ಮತ್ತು ಸನ್ ಫಾರ್ಮಾ ಷೇರುಗಳು ಇಳಿಕೆ ದಾಖಲಿಸಿದವು. ‘ಈಚೆಗೆ ಮಾರುಕಟ್ಟೆಯಲ್ಲಿ ಕಂಡುಬಂದ ಭರ್ಜರಿ ವಹಿವಾಟಿನ ನಂತರದಲ್ಲಿ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಕಂಪನಿ ಷೇರುಗಳ ಮೌಲ್ಯ ಹೆಚ್ಚಳದ ವೇಗ ತಗ್ಗಿದೆ. ಮುಂದೆ ಆಗುವ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ವಲಯದ ಷೇರುಗಳ ವಿಚಾರವಾಗಿ ಎಚ್ಚರಿಕೆಯ ವಹಿವಾಟು ನಡೆದಿದೆ’ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.