ನವದೆಹಲಿ: ‘ಭಾರತ್ ಟ್ಯಾಕ್ಸಿ’ ಸೇವೆಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಗುರುವಾರ ಚಾಲನೆ ನೀಡಲಿದ್ದಾರೆ.

ಮುಂದಿನ ಎರಡು ವರ್ಷದಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ವಿವಿಧ ನಗರಗಳಲ್ಲಿ ಈ ಸೇವೆಯನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಕಳೆದ ಡಿಸೆಂಬರ್ 2ರಂದು ದೆಹಲಿ–ಎನ್ಸಿಆರ್ ಮತ್ತು ಗುಜರಾತ್ನಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಯಿತು. ಈ ಸೇವೆಯು ಓಲಾ, ಊಬರ್ ಮತ್ತು ರ್ಯಾಪಿಡೋಗೆ ಸ್ಪರ್ಧೆ ನೀಡಲಿದೆ ಎನ್ನಲಾಗಿದೆ.

ಸಹಕಾರ ತತ್ತ್ವದ ಆಧಾರದಲ್ಲಿ ಆ್ಯಪ್ ಮೂಲಕ ಟ್ಯಾಕ್ಸಿ ಸೇವೆ ಒದಗಿಸುವ ಜಗತ್ತಿನ ಅತಿದೊಡ್ಡ ವೇದಿಕೆ ಇದಾಗಿದೆ. ಅಲ್ಲದೆ, ಚಾಲಕರ ಮಾಲೀಕತ್ವದ ವಿಶ್ವದ ಅತಿದೊಡ್ಡ ವೇದಿಕೆಯೂ ಹೌದು ಎಂದು ಸಹಕಾರ ಸಚಿವಾಲಯವು ಹೇಳಿದೆ.

ಈ ಸೇವೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಅಧಿಕ ಚಾಲಕರು ಈ ವೇದಿಕೆ ಸೇರಿದ್ದಾರೆ, 1 ಲಕ್ಷ ಹೆಚ್ಚು ಬಳಕೆದಾರರು ನೋಂದಣಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.