ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಚ್‌ಇಎಲ್‌ಗೆ ಅದಾನಿ ಪವರ್‌ ಕಂಪನಿಯಿಂದ ₹7 ಸಾವಿರ ಕೋಟಿ ಮೌಲ್ಯದ ಆರ್ಡರ್‌

Published 14 ಜೂನ್ 2024, 15:54 IST
Last Updated 14 ಜೂನ್ 2024, 15:54 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಪವರ್‌ ಕಂಪನಿಯಿಂದ ₹7 ಸಾವಿರ ಕೋಟಿ ಮೌಲ್ಯದ ಎರಡು ಹೊಸ ಆರ್ಡರ್‌ಗಳು ಲಭಿಸಿವೆ ಎಂದು ಸರ್ಕಾರಿ ಸ್ವಾಮ್ಯದ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ (ಬಿಎಚ್‌ಇಎಲ್‌) ಶುಕ್ರವಾರ ತಿಳಿಸಿದೆ.

ಅದಾನಿ ಕಂಪನಿಯು ಛತ್ತೀಸಗಢದ ರಾಯ್‌ಪುರ ಜಿಲ್ಲೆ ಮತ್ತು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸುತ್ತಿದೆ. ಈ ಎರಡೂ ಸ್ಥಾವರಗಳಿಂದ ಆರ್ಡರ್‌ ಪಡೆಯಲಾಗಿದೆ ಎಂದು ತಿಳಿಸಿದೆ.

ಬಿಎಚ್‌ಇಎಲ್‌ನ ತಿರುಚಿ ಮತ್ತು ಹರಿದ್ವಾರದ ಸ್ಥಾವರದಲ್ಲಿ ಸ್ಟೀಮ್‌ ಜನರೇಟರ್‌, ಸ್ಟೀಮ್‌ ಟರ್ಬೈನ್ಸ್‌ ಮತ್ತು ಜನರೇಟರ್‌ಗಳನ್ನು ತಯಾರಿಸಿ ಪೂರೈಸಲಾಗುತ್ತದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT