ನವದೆಹಲಿ: ದೇಶದ ಅತಿ ದೊಡ್ಡ ಕುಡಿಯುವ ನೀರಿನ ಮಾರಾಟ ಕಂಪನಿ ‘ಬಿಸ್ಲೆರಿ‘ಯನ್ನು ಟಾಟಾ ಸಮೂಹ ಖರೀದಿ ಮಾಡಲಿದೆ ಎಂದು ವರದಿಯಾಗಿದೆ.

ಸುಮಾರು ₹ 6000–7000 ಕೋಟಿಗೆ ಈ ಡೀಲ್ ನಡೆಯುವ ಸಾಧ್ಯತೆ ಇದೆ.

ಬಿಸ್ಲೆರಿಯ ಮಾಲೀಕರಾಗಿರುವ ರಮೇಶ್ ಚೌಹಾಣ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರ ಪುತ್ರಿ ಜಯಂತಿ ಉದ್ಯಮವನ್ನು ವಹಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಉದ್ಯಮವನ್ನು ವಿಸ್ತರಿಸಲು ಬೇರೆ ಉತ್ತರಾಧಿಕಾರಿ ಇಲ್ಲ. ಹೀಗಾಗಿ ಬಿಸ್ಲೆರಿಯನ್ನು ಮಾರಾಟ ಮಾಡಲು ರಮೇಶ್ ಮುಂದಾಗಿದ್ದಾರೆ.

ಸದ್ಯದ ಆಡಳಿತ ಮಂಡಳಿ ಎರಡು ವರ್ಷಗಳ ಕಾಲ ಮುಂದುವರಿಯಲಿದೆ ಎಂದು ರಮೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಟಾಟಾ ಸಮೂಹವು ಕಂಪನಿಯನ್ನು ಹೆಚ್ಚಿನ ಉಮೇದಿನಿಂದ ಪೋಷಿಸಲಿದೆ‘ ಎಂದು ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಟಾಟಾ ಸಮೂಹ ಸಂಸ್ಕೃತಿಯನ್ನು ಹಾಗೂ ಧೃಡತೆಯನ್ನು ನಾನು ಗೌರವಿಸುತ್ತೇನೆ. ಹೀಗಾಗಿ ಬೇರೆ ಖರೀದಿದಾರರು ಹೆಚ್ಚು ಆಸಕ್ತಿ ತೋರಿದರೂ ಟಾಟಾಗೆ ಮಾರಾಟ ಮಾಡಲು ನಿರ್ಧರಿಸಿದೆ‘ ಎಂದು ರಮೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.