ಭಾನುವಾರ, ಏಪ್ರಿಲ್ 11, 2021
21 °C

ಬಾಷ್‌: ಬಿಡದಿ 2ನೇ ಹಂತದವಿಸ್ತರಣಾ ಘಟಕಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾಹನ ಬಿಡಿಭಾಗ ತಯಾರಿಕೆಯ ದೈತ್ಯ ಸಂಸ್ಥೆ ಬಾಷ್‌ನ ಬಿಡದಿಯಲ್ಲಿನ ಎರಡನೆ ಹಂತದ ವಿಸ್ತರಣಾ  ಘಟಕಕ್ಕೆ ಬುಧವಾರ ಚಾಲನೆ ನೀಡಲಾಗಿದೆ.

‘ಸಂಸ್ಥೆಯು ಭಾರತದಲ್ಲಿ ಹೆಚ್ಚು ಕಾರ್ಯಕ್ಷಮತೆಯ  ಸುಸ್ಥಿರ ಉತ್ಪಾದನೆಯತ್ತ ಹೆಜ್ಜೆ ಇಟ್ಟಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ಬೇಡಿಕೆ ಈಡೇರಿಸಲು ಮತ್ತು ಸ್ಪರ್ಧಾತ್ಮಕತೆಯ ಮಟ್ಟ ಹೆಚ್ಚಿಸಲು ಇದು ಪೂರಕ ಹೆಜ್ಜೆಯಾಗಿದೆ. ಈ ಹೊಸ ಘಟಕಕ್ಕೆ ಕಂಪನಿಯು ₹ 238 ಕೋಟಿ ಬಂಡವಾಳ ಹೂಡಿಕೆ ಮಾಡಿದೆ. 2,500 ಕ್ಕೂ ಹೆಚ್ಚು ಜನರು ಇಲ್ಲಿ  ಕೆಲಸ ಮಾಡಬಹುದಾಗಿದೆ’ ಎಂದು ರಾಬರ್ಟ್ ಬಾಷ್ ಜಿಎಂಬಿಎಚ್‍ನ ಆಡಳಿತ ಮಂಡಳಿಯ ಅಧ್ಯಕ್ಷ ವೋಕ್ಮರ್ ಡೆನ್ನರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ತಂತ್ರಜ್ಞಾನ ಕೇಂದ್ರ: ಬಿಡದಿಯಲ್ಲಿನ ಈ ಎರಡನೆ ಹಂತದ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿರುವುದರಿಂದ ಆಡುಗೋಡಿಯಲ್ಲಿನ  ತಯಾರಿಕಾ ಘಟಕವನ್ನು ಅತ್ಯಾಧುನಿಕ ಎಂಜಿನಿಯರಿಂಗ್‌ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು. ಇದು ಜರ್ಮನಿ ಹೊರಗಿನ ಅತಿದೊಡ್ಡ ಬಾಷ್‌ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವಾಗಿರಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.