ಬೆಂಗಳೂರು: ಬ್ರಿಗೇಡ್ ಹೋಟೆಲ್ ವೆಂಚರ್ಸ್ ಲಿಮಿಟೆಡ್ ಕಂಪನಿಯು ಐಪಿಒ ಮೂಲಕ ₹759 ಕೋಟಿ ಸಂಗ್ರಹಿಸಲಿದೆ. ಐಪಿಒ ಭಾಗವಾಗಿ ಈಕ್ವಿಟಿ ಷೇರುಗಳಿಗೆ ಬಿಡ್ ಸಲ್ಲಿಸಲು ಗುರುವಾರದಿಂದ ಅವಕಾಶ ಇರಲಿದೆ.

ಬಿಡ್ ಸಲ್ಲಿಸಲು ಸೋಮವಾರ ಕಡೆಯ ದಿನ. ₹ 10 ಮುಖಬೆಲೆಯ ಪ್ರತಿ ಷೇರಿಗೆ ₹85-90 ಬೆಲೆ ನಿಗದಿ ಮಾಡಲಾಗಿದೆ. ಕಂಪನಿಯ ಅರ್ಹ ನೌಕರರಿಗೆ ₹ 7.59 ಕೋಟಿ ಮೌಲ್ಯದ ಷೇರುಗಳನ್ನು ಮೀಸಲಾಗಿ ಇರಿಸಲಾಗಿದೆ. ಅರ್ಹ ನೌಕರರಿಗೆ ಪ್ರತಿ ಷೇರಿಗೆ ₹3ರಷ್ಟು ರಿಯಾಯಿತಿ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಡ್ ಸಲ್ಲಿಸುವವರು ಕನಿಷ್ಠ 166 ಷೇರುಗಳಿಗೆ ಬಿಡ್ ಮಾಡಬೇಕು. ಕಂಪನಿಯು ಐಪಿಒ ಮೂಲಕ ಸಂಗ್ರಹಿಸುವ ಮೊತ್ತವನ್ನು ಕೆಲವು ಬಾಕಿ ಮೊತ್ತಗಳ ಮರುಪಾವತಿಗೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದೆ. ಜೆಎಂ ಫೈನಾನ್ಶಿಯಲ್ ಲಿಮಿಟೆಡ್ ಮತ್ತು ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್ ಕಂಪನಿಗಳು ಈ ಪ್ರಕ್ರಿಯೆಯಲ್ಲಿ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ ಹೊಣೆಯನ್ನು ನಿರ್ವಹಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.