ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಕ್ಷಿಪಣಿ, ಮದ್ದುಗುಂಡು ತಯಾರಿಕಾ ಕಂಪನಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ನ ಷೇರು ಮೌಲ್ಯವು ₹1,900ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ವರಮಾನವು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 30ರಷ್ಟು ಏರಿಕೆ ದಾಖಲಿಸಿದೆ. ಕಾರ್ಯಾದೇಶದಲ್ಲಿ ಹೆಚ್ಚಳ ಮತ್ತು ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಗಳು ಸುಧಾರಿಸಿರುವುದು ವರಮಾನ ಹೆಚ್ಚಳಕ್ಕೆ ಕಾರಣವಾಗಿ ಒದಗಿಬಂದಿವೆ. ಕಾರ್ಯಾದೇಶಗಳ ಮೊತ್ತ ₹23,300 ಕೋಟಿಯಷ್ಟಾಗಿದ್ದು, ಮುಂದಿನ ತ್ರೈಮಾಸಿಕಗಳಲ್ಲಿ ಅವುಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದು ಸುಧಾರಿಸಲಿದೆ ಎಂದು ಕೂಡ ಬ್ರೋಕರೇಜ್ ಸಂಸ್ಥೆಯು ಹೇಳಿದೆ.

2024–25ರಿಂದ 2027–28ರ ಆರ್ಥಿಕ ವರ್ಷದವರೆಗೆ ಕಂಪನಿಯ ತೆರಿಗೆ ನಂತರದ ಲಾಭದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್) ಶೇ 51ರಷ್ಟು ಇರಲಿದೆ. ಷೇರು ಹೂಡಿಕೆ ಮೇಲಿನ ಗಳಿಕೆ (ಆರ್ಒಇ) ಮತ್ತು ತೊಡಗಿಸಿದ ಬಂಡವಾಳಕ್ಕೆ ಪ್ರತಿಯಾಗಿ ಲಾಭ (ಆರ್ಒಸಿಇ) ಶೇ 25ರಷ್ಟಿರಲಿದೆ ಎಂದು ಅಂದಾಜಿಸಿದೆ.

ಬುಧವಾರದ ವಹಿವಾಟಿನ ಅಂತ್ಯಕ್ಕೆ ಭಾರತ್ ಡೈನಾಮಿಕ್ಸ್ ಷೇರಿನ ಮೌಲ್ಯವು ₹1590.70 ಆಗಿತ್ತು.

(ಬ್ರೋಕರೇಜ್ ಕಂಪನಿಗಳು ನೀಡುವ ಮಾಹಿತಿ, ವಿವರಗಳಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.