ಶುಕ್ರವಾರ, ಫೆಬ್ರವರಿ 28, 2020
19 °C

ಬಿಎಸ್‌ಎನ್‌ಎಲ್‌, ಏರ್‌ ಇಂಡಿಯಾಅತಿ ಹೆಚ್ಚು ನಷ್ಟದ ಕಂಪನಿಗಳು

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಏರ್ ಇಂಡಿಯಾ ಮತ್ತು ಎಂಟಿಎನ್‌ಎಲ್‌ ಕಂಪನಿಗಳು ಸತತ ಮೂರನೇ ಹಣಕಾಸು ವರ್ಷದಲ್ಲಿಯೂ ನಷ್ಟ ಕಂಡಿವೆ.

2018‌–19ರಲ್ಲಿ ಕೇಂದ್ರೋದ್ಯಮಗಳಲ್ಲಿಯೇ ಈ ಕಂಪನಿಗಳ ನಷ್ಟವು ಗರಿಷ್ಠ ಮಟ್ಟದಲ್ಲಿವೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಮೀಕ್ಷೆಯಲ್ಲಿ ಈ ಮಾಹಿತಿ ನೀಡಲಾಗಿದೆ. 

ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯ ಜತೆಗೂಡಿ ಪ್ರತಿ ವರ್ಷವೂ ಕೇಂದ್ರೋದ್ಯಮಗಳ ಹಣಕಾಸು ಸಾಧನೆಗೆ ಸಂಬಂಧಿಸಿದ ಮಾಹಿತಿ ನೀಡುತ್ತವೆ.

ನಷ್ಟದಲ್ಲಿರುವ ಒಟ್ಟಾರೆ 70 ಕಂಪನಿಗಳಲ್ಲಿ 10 ಕಂಪನಿಗಳ ನಷ್ಟದ ಪ್ರಮಾಣವೇ ಶೇ 94.04ರಷ್ಟಿದೆ.

ಎಕ್ಸೈಸ್‌, ಕಸ್ಟಮ್ಸ್‌ ಸುಂಕ, ಜಿಎಸ್‌ಟಿ, ಕಾರ್ಪೊರೇಟ್‌ ತೆರಿಗೆ, ಲಾಭಾಂಶ, ಸಾಲದ ಮೇಲಿನ ಬಡ್ಡಿದರ, ಮತ್ತು ಇತರೆ ಸುಂಕ ಮತ್ತು ತೆರಿಗೆಗಳಿಂದ ಸರ್ಕಾರದ ಬೊಕ್ಕಸಕ್ಕೆ 2018–19ರಲ್ಲಿ ₹3,68,803 ಕೋಟಿ ಬಂದಿದೆ. 2017–18ರಲ್ಲಿ ₹3,52,361 ಕೋಟಿ ಬಂದಿತ್ತು. ಇದಕ್ಕೆ ಹೋಲಿಸಿದರೆ ಶೇ 4.67ರಷ್ಟು ಹೆಚ್ಚಾಗಿದೆ.

ಲಾಭದಲ್ಲಿ 3 ಕಂಪನಿಗಳು: ಒಎನ್‌ಜಿಸಿ, ಇಂಡಿಯನ್‌ ಆಯಿಲ್‌ ಮತ್ತು ಎನ್‌ಟಿಪಿಸಿ ಲಾಭದಾಯಕ ಕಂಪನಿಗಳಾಗಿವೆ. ಕೇಂದ್ರೋದ್ಯಮಗಳು ಗಳಿಸಿಕೊಂಡಿರುವ ಒಟ್ಟಾರೆ ಲಾಭದಲ್ಲಿ ಒಎನ್‌ಜಿಸಿ ಶೇ 15.3, ಇಂಡಿಯನ್‌ ಆಯಿಲ್‌ ಶೇ 9.68 ಮತ್ತು ಎನ್‌ಟಿಪಿಸಿ ಶೇ 6.73ರಷ್ಟು ಕೊಡುಗೆ ನೀಡಿವೆ.

 

ಕೇಂದ್ರೋದ್ಯಮಗಳ ಮಾಹಿತಿ

348

ಒಟ್ಟಾರೆ ಸಂಖ್ಯೆ

249

ಕಾರ್ಯಾಚರಣೆ ನಡೆಸುತ್ತಿರುವ 

86

ನಿರ್ಮಾಣ ಹಂತದಲ್ಲಿ ಇರುವ 

13

ಮುಚ್ಚುವ / ದಿವಾಳಿ ಹಂತದಲ್ಲಿ

 

70

ನಷ್ಟದಲ್ಲಿರುವ ಕಂಪನಿಗಳು

94.04%

ನಷ್ಟದಲ್ಲಿರುವ ಕಂಪನಿಗಳಲ್ಲಿ 10 ಕಂಪನಿಗಳ ಪಾಲು

 

ವರಮಾನ ಹೆಚ್ಚಳ

₹24,40,748 ಕೋಟಿ

2018–19ರಲ್ಲಿ

₹20,32,001 ಕೋಟಿ

2017–18ರಲ್ಲಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು