ಬುಧವಾರ, ಜನವರಿ 29, 2020
28 °C

ಆಸ್ತಿ ಮಾರಾಟಕ್ಕೆ ಬಿಎಸ್‌ಎನ್‌ಎಲ್‌ ಸಿದ್ಧತೆ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕಂಪನಿಯು ತನ್ನಲ್ಲಿರುವ ಆಸ್ತಿಗಳನ್ನು ನಗದೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

‘₹ 20,160 ಕೋಟಿ ಮೌಲ್ಯದ 14 ಆಸ್ತಿಗಳನ್ನು ಗುರುತಿಸಿದ್ದು, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಗೆ (ಡಿಐಪಿಎಂ) ಮಾಹಿತಿ ನೀಡಲಾಗಿದೆ’ ಎಂದು ಅಧ್ಯಕ್ಷ ಪಿ.ಕೆ. ಪೂರ್ವರಾ ಅವರು ತಿಳಿಸಿದ್ದಾರೆ.

ಕೌಶಲಾಭಿವೃದ್ಧಿ ಸಚಿವಾಲಯವು ಲಭ್ಯವಿರುವ ಭೂಮಿಯ ಸ್ವಲ್ಪ ಭಾಗವನ್ನು ಕೇಳಿತ್ತು. ಅದಕ್ಕೆ ದೂರಸಂಪರ್ಕ ಇಲಾಖೆಯು ಗಾಜಿಯಾಬಾದ್‌ನಲ್ಲಿ ಬಿಎಸ್‌ಎನ್‌ಎಲ್‌ ಹೊಂದಿರುವ ಭೂಮಿಯಲ್ಲಿ ನಿರ್ದಿಷ್ಟ ಭಾಗವನ್ನು ನೀಡುವುದಾಗಿ ಹೇಳಿದೆ. ಇದರಿಂದ ₹ 2 ಸಾವಿರ ಕೋಟಿ ಬರುವ ಅಂದಾಜು ಮಾಡಲಾಗಿದೆ.

ಮುಂಬೈ, ತಿರುವನಂತಪುರ, ಚೆನ್ನೈ, ಗಾಜಿಯಾಬಾದ್‌ ಮತ್ತು ಇತರೆ ಪ್ರದೇಶಗಳಲ್ಲಿ ಕಂಪನಿಯು ಭೂಮಿಯನ್ನು ಹೊಂದಿದೆ ಎಂದು ಪೂರ್ವರಾ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಪುನಶ್ಚೇತನ ಯೋಜನೆಗೆ ಕೇಂದ್ರ ಸರ್ಕಾರ ₹ 69 ಸಾವಿರ ಕೋಟಿ ಮೊತ್ತದ ಪ್ಯಾಕೇಜ್‌ ನಿಗದಿಪಡಿಸಿದೆ. ಆಸ್ತಿಗಳ ನಗದೀಕರಣ, ಸಿಬ್ಬಂದಿಗೆ ವಿಆರ್‌ಎಸ್‌ ನೀಡುವ ಮೂಲಕ ಎರಡು ವರ್ಷಗಳಲ್ಲಿ ಲಾಭದಾಯಕವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು