ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2022: ಇದೇ ವರ್ಷ ನಡೆಯಲಿದೆ 5ಜಿ ತರಂಗಾಂತರ ಹರಾಜು

Last Updated 1 ಫೆಬ್ರುವರಿ 2022, 7:52 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಶೀಘ್ರದಲ್ಲೇ 5ಜಿ ಸಂಪರ್ಕ ಸಾಧ್ಯವಾಗುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿದ್ದಾರೆ. 5ಜಿ ಸಂಪರ್ಕ ಸೇವೆಗಳಿಗಾಗಿ ಇದೇ ವರ್ಷ ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆಸುವುದಾಗಿ ಉಲ್ಲೇಖಿಸಿದರು.

ಈ ಮೂಲಕ ದೇಶದಲ್ಲಿ 2023ಕ್ಕೆ ಖಾಸಗಿ ದೂರಸಂಪರ್ಕ ಸೇವಾಧಾರ ಕಂಪನಿಗಳ ಮೂಲಕ ಗ್ರಾಹಕರಿಗೆ 5ಜಿ ಸಂಪರ್ಕ ಸೇವೆ ಪೂರೈಕೆ ಸಾಧ್ಯವಾಗಲಿದೆ. ತಯಾರಿಕೆ ಆಧಾರಿತ ಉತ್ತೇಜನ (ಪಿಐಎಲ್‌) ಯೋಜನೆಯ ಭಾಗವಾಗಿ ವಿನ್ಯಾಸ ಆಧಾರಿತ ತಯಾರಿಕೆಯಿಂದ 5ಜಿಗಾಗಿ ಸಮರ್ಥ ವ್ಯವಸ್ಥೆ ರೂಪಿಸುವುದು ಸಾಧ್ಯವಾಗಲಿದೆ ಎಂದರು.

2022 ಮತ್ತು 2023ರಲ್ಲಿ ಭಾರತ್‌ನೆಟ್‌ ಯೋಜನೆಯ ಅಡಿಯಲ್ಲಿ ಎಲ್ಲ ಗ್ರಾಮಗಳಿಗೆ ಆಪ್ಟಿಕಲ್‌ ಫೈಬರ್‌ ಹಾಕಲು ಕೇಂದ್ರ ಸರ್ಕಾರವು ಗುತ್ತಿಗೆ ನೀಡುತ್ತಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದ್ದು, 2025ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇರುವುದಾಗಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT