ನವದೆಹಲಿ: ದಟ್ಟಣೆ ಅವಧಿಯಲ್ಲಿ ಪ್ರಯಾಣಿಕರಿಗೆ ಮೂಲ ದರಕ್ಕಿಂತ ದುಪ್ಪಟ್ಟು ಶುಲ್ಕ ವಿಧಿಸಲು ಓಲಾ, ಉಬರ್ ಹಾಗೂ ರ್ಯಾಪಿಡೊ ಮುಂತಾದ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಕಂಪನಿಗಳಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಹಿಂದೆ ಒಂದೂವರೆ ಪಟ್ಟು ಮಾತ್ರ ವಿಧಿಸಲು ಅವಕಾಶ ಇತ್ತು.
.ಓಲಾ, ಉಬರ್, ರ್ಯಾಪಿಡೊ ಬೈಕ್ ಸೇವೆ ನಿರ್ಬಂಧ.
ಅಲ್ಲದೆ ದಟ್ಟಣೆ ರಹಿತ ಅವಧಿಗಳಲ್ಲಿ ಶುಲ್ಕವು ಮೂಲ ದರದ ಕನಿಷ್ಠ ಶೇ 50 ರಷ್ಟು ಇರಬೇಕು ಎಂದು ಹೇಳಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ‘ಮೋಟಾರು ವಾಹನ ಅಗ್ರಗೇಟರ್ ಮಾರ್ಗಸೂಚಿ–2025’ಯಲ್ಲಿ ಇದನ್ನು ಉಲ್ಲೇಖಿಸಿದೆ.

ಅಲ್ಲದೆ ಪ್ರಯಾಣಿಕರನ್ನು ಪಿಕ್ಅಪ್ ಮಾಡಲು ತೆರಳಿದ ದೂರ ಹಾಗೂ ಇಂಧನ ಖರ್ಚು ಸರಿದೂಗಿಸಲು ಮೂರು ಕಿಲೋ ಮೀಟರ್ಗೆ ಮೂಲದರ ವಿಧಿಸಲಾಗುತ್ತದೆ.
.ಓಲಾ, ಉಬರ್ ಮಾದರಿಯಲ್ಲೇ ‘ಸಹಕಾರ್ ಟ್ಯಾಕ್ಸಿ’ ಜಾರಿಗೆ ಸಿದ್ಧತೆ: ಶಾ ಘೋಷಣೆ.
ವಿವಿಧ ಮಾದರಿಯ ವಾಹನಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ದರವೇ ಆ್ಯಪ್ಗಳು ಗ್ರಾಹಕರಿಗೆ ವಿಧಿಸಬೇಕಾದ ಮೂಲ ದರ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಪರಿಷ್ಕೃತ ಮಾರ್ಗಸೂಚಿಯನ್ನು ಮೂರು ತಿಂಗಳ ಒಳಗಾಗಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ.

ಒಂದು ವೇಳೆ ಚಾಲಕನೇ ಸಕಾರಣವಿಲ್ಲದೆ ಪ್ರಯಾಣ ರದ್ದು ಮಾಡಿದರೆ, ₹ 100 ಮೀರದ ಪ್ರಯಾಣ ದರದ ಶೇ 10ರಷ್ಟು ದಂಡ ವಿಧಿಸಬಹುದು. ಈ ನಿಯಮ ಪ್ರಯಾಣಿಕರಿಗೂ ಅನ್ವಯ.
.ಬೆಂಗಳೂರಿನಲ್ಲಿ ಬಸ್ ಸೇವೆಗೆ ಚಿಂತನೆ: ಉಬರ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.