ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಬ್ಯಾಂಕ್‌ಗೆ ₹3,656 ಕೋಟಿ ಲಾಭ

Published 24 ಜನವರಿ 2024, 15:53 IST
Last Updated 24 ಜನವರಿ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ₹3,656 ಕೋಟಿ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹2,832 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಮೂರನೇ ತ್ರೈಮಾಸಿಕದಲ್ಲಿ ಶೇ 29ರಷ್ಟು ಆದಾಯ ಹೆಚ್ಚಳವಾಗಿದೆ ಎಂದು‌ ಬ್ಯಾಂಕ್‌ ತಿಳಿಸಿದೆ.

ಹಿಂದಿನ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ವರಮಾನವು ₹26,218 ಕೋಟಿ ಇತ್ತು. ಈ ಅವಧಿಯಲ್ಲಿ ₹32,334 ಕೋಟಿಗೆ ಏರಿಕೆಯಾಗಿದೆ. ಅಲ್ಲದೇ, ನಿವ್ವಳ ಬಡ್ಡಿ ಆದಾಯವು ಶೇ 9.5ರಷ್ಟು ಏರಿಕೆಯಾಗಿದ್ದು, ಒಟ್ಟು ₹9,417 ಕೋಟಿ ಆಗಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಇಳಿಕೆಯಾಗಿದೆ. 2023ರ ಡಿಸೆಂಬರ್‌ನಲ್ಲಿ ಶೇ 5.89 ಇತ್ತು. ಈ ತ್ರೈಮಾಸಿಕದಲ್ಲಿ ಶೇ 4.39ಕ್ಕೆ ಇಳಿಕೆಯಾಗಿದೆ. ನಿವ್ವಳ ಎನ್‌ಪಿಎ ಶೇ 1.96ರಿಂದ ಶೇ 1.32ಕ್ಕೆ ಕುಗ್ಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗೆ ಲಾಭ:

ಡಿಸೆಂಬರ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಲಾಭದಲ್ಲಿ ಶೇ 30ರಷ್ಟು ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹555 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹723 ಕೋಟಿ ಲಾಭ ಗಳಿಸಿದೆ.

ಕಾರ್ಯಾಚರಣೆ ಲಾಭವು ₹1,540 ಕೋಟಿಯಿಂದ ₹1,780 ಕೋಟಿಗೆ ಏರಿಕೆಯಾಗಿದೆ. ಒಟ್ಟು ವರಮಾನವು ₹6,006 ಕೋಟಿಯಿಂದ ₹7,437 ಕೋಟಿಗೆ ಏರಿಕೆಯಾಗಿದೆ.

ಎನ್‌ಪಿಎ ಸರಾಸರಿ ಪ್ರಮಾಣವು ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 8.19ರಷ್ಟು ಇದ್ದಿದ್ದು, ಶೇ 3.90ಕ್ಕೆ ಇಳಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT