ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಐ ಜೊತೆ ಕೆನರಾ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಜೋಡಿಸಲು ಅವಕಾಶ

Last Updated 15 ಮಾರ್ಚ್ 2023, 12:29 IST
ಅಕ್ಷರ ಗಾತ್ರ

ಬೆಂಗಳೂರು: ಕೆನರಾ ಬ್ಯಾಂಕ್‌ನ ಗ್ರಾಹಕರು ಇನ್ನು ಮುಂದೆ ತಮ್ಮ ರುಪೇ ಕ್ರೆಡಿಟ್‌ ಕಾರ್ಡ್‌ಗಳನ್ನು ಯುಪಿಐ ಐಡಿ ಜೊತೆ ಜೋಡಿಸಿಕೊಳ್ಳಬಹುದು. ಯುಪಿಐ ಪಾವತಿಗೆ ಅವಕಾಶ ಕಲ್ಪಿಸುವ ಭೀಮ್‌ ಆ್ಯಪ್‌ ಅಥವಾ ಇತರ ಯಾವುದೇ ಆ್ಯಪ್‌ ಬಳಸಿ ಹೀಗೆ ಮಾಡಬಹುದು.

ಕೆನರಾ ಬ್ಯಾಂಕ್‌ನ ರುಪೇ ಕ್ರೆಡಿಟ್‌ ಕಾರ್ಡ್ ಹಾಗೂ ಬಳಕೆದಾರರ ಯುಪಿಐ ಐಡಿ ಜೋಡಣೆ ಆದ ನಂತರದಲ್ಲಿ, ಯುಪಿಐ ಬಳಸಿ ಕ್ರೆಡಿಟ್‌ ಕಾರ್ಡ್‌ನಿಂದ ಹಣ ಪಾವತಿಸಬಹುದು. ಹಣ ಪಾವತಿ ಪ್ರಕ್ರಿಯೆಯು, ಯುಪಿಐ ಬಳಸಿ ಖಾತೆಯಿಂದ ಹಣ ಪಾವತಿಸುವ ರೀತಿಯಲ್ಲಿಯೇ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

‘ಕೆನರಾ ಬ್ಯಾಂಕ್‌ ಗ್ರಾಹಕರಿಗೆ ತಮ್ಮ ಕ್ರೆಡಿಟ್ ಕಾರ್ಡ್ ಬಳಸಲು ಹೆಚ್ಚು ಅವಕಾಶ ಸಿಗಲಿದೆ. ಇದರಿಂದ ವರ್ತಕರಿಗೂ ಅನುಕೂಲ ಆಗಲಿದೆ. ವರ್ತಕರ ಬಳಿ ಪಿಒಎಸ್ ಯಂತ್ರ ಇಲ್ಲದಿದ್ದರೂ, ಅವರು ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸ್ವೀಕರಿಸಬಹುದು’ ಎಂದು ಕೆನರಾ ಬ್ಯಾಂಕ್ ಮತ್ತು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೇಳಿವೆ.

‘ಈ ಕ್ರಮದಿಂದಾಗಿ ಸಣ್ಣ ವರ್ತಕರು ಯುಪಿಐ ಮೂಲಕ ಕ್ರೆಡಿಟ್‌ ಕಾರ್ಡ್‌ ಪಾವತಿಗಳನ್ನು ಸ್ವೀಕರಿಸಬಹುದು. ಇದಕ್ಕೆ ಅವರು ಕೊಡಬೇಕಿರುವ ಎಂಡಿಆರ್ ಶುಲ್ಕ ನಗಣ್ಯ’ ಎಂದು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಕೆ. ಸತ್ಯನಾರಾಯಣ ರಾಜು ಹೇಳಿದ್ದಾರೆ.

ಯುಪಿಐ ಜೊತೆ ಕ್ರೆಡಿಟ್‌ ಕಾರ್ಡ್‌ ಜೋಡಿಸಲು ಆರ್‌ಬಿಐ 2022ರ ಜೂನ್‌ನಲ್ಲಿ ಒಪ್ಪಿಗೆ ನೀಡಿದೆ. ರುಪೇ ಕ್ರೆಡಿಟ್‌ ಕಾರ್ಡ್‌ ಮತ್ತು ಯುಪಿಐ ಜೋಡಿಸಿಕೊಳ್ಳಲು ಎಚ್‌ಡಿಎಫ್‌ಸಿ ಬ್ಯಾಂಕ್ ಈ ವರ್ಷದ ಫೆಬ್ರುವರಿಯಲ್ಲಿ ಅವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT