ಮಂಗಳವಾರ, ಏಪ್ರಿಲ್ 13, 2021
28 °C

ರಾಜ್ಯದಲ್ಲಿ ಕ್ಯಾನನ್‌ ಪ್ರಿಂಟರ್ಸ್‌ ಮಾರುಕಟ್ಟೆ ವಿಸ್ತರಣೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿನ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಮಾರುಕಟ್ಟೆ ವಿಸ್ತರಿಸಲು ಪ್ರಿಂಟರ್ಸ್‌ಗಳ ತಯಾರಿಕಾ ಸಂಸ್ಥೆ ಕ್ಯಾನನ್‌ ಇಂಡಿಯಾ ಉದ್ದೇಶಿಸಿದೆ.

‘ರಾಜ್ಯದಲ್ಲಿ 300 ರಿಟೇಲ್‌ ಮಳಿಗೆಗಳ ಮೂಲಕ ಎಲ್ಲ ಬಗೆಯ ಗ್ರಾಹಕರನ್ನು ತಲುಪಲು ಉದ್ದೇಶಿಸಲಾಗಿದೆ. ಜಿಎಸ್‌ಟಿ ಜಾರಿಗೆ ಬಂದ ನಂತರ ಎಸ್‌ಎಂಇಗಳ ವಹಿವಾಟಿನ ಅನುಕೂಲತೆಗಾಗಿ ಪ್ರಿಂಟರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ರಿಟೇಲ್‌, ಟಿವಿ ಚಾನೆಲ್‌, ಇ–ಕಾಮರ್ಸ್‌ ಸೇರಿದಂತೆ ಗ್ರಾಹಕರಿಗೆ ಎಲ್ಲೆಡೆ ಸುಲಭವಾಗಿ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಕ್ಯಾನನ್‌ ಇಂಡಿಯಾದ ಕನ್ಸುಮರ್ ಸಿಸ್ಟಮ್ಸ್‌ ಪ್ರಾಡಕ್ಟ್‌ (ಸಿಎಸ್‌ಪಿ) ವಿಭಾಗದ ನಿರ್ದೇಶಕ ಸಿ. ಸುಕುಮಾರನ್‌ ಹೇಳಿದ್ದಾರೆ.

ಹೆಚ್ಚಿದ ಬೇಡಿಕೆ: ‘ಇಂಜೆಕ್ಟ್‌ (ಇಂಕ್‌ ತಂತ್ರಜ್ಞಾನ) ಮತ್ತು ಲೇಸರ್‌ ಪ್ರಿಂಟರ್‌ಗಳ (ಟೋನರ್‌ ತಂತ್ರಜ್ಞಾನ) ಪೈಕಿ ಗೃಹ ಬಳಕೆ, ಗೃಹ ಕಚೇರಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ (ಎಸ್‌ಎಂಇ)  ಇಂಜೆಕ್ಟ್‌ ಪ್ರಿಂಟರ್ಸ್‌ಗಳ (ಎ4) ಮಾರುಕಟ್ಟೆ ಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ. ಇಂಜೆಕ್ಟ್‌ ಪ್ರಿಂಟರ್ಸ್‌ನಲ್ಲಿ ಈ ಹಿಂದೆ ಬಳಸಲಾಗುತ್ತಿದ್ದ  ಕಾರ್ಟಿಡ್ಜ್‌ಗಳಿಗೆ ಬದಲಾಗಿ ಈಗ ನಿರಂತರವಾಗಿ ಇಂಕ್‌ ಪೂರೈಕೆಯಾಗುವ  ಇಂಕ್‌ ಟ್ಯಾಂಕ್‌  ಬಳಸಲಾಗುತ್ತಿದೆ. ಇದರಿಂದ  ಪ್ರತಿ ಪುಟದ ಪ್ರಿಂಟ್‌ ವೆಚ್ಚ ₹ 1.20 ದಿಂದ ಕೇವಲ 9 ಪೈಸೆಗೆ ಇಳಿದಿದೆ. 

‘ವಿದ್ಯಾರ್ಥಿಗಳ ಪ್ರಾಜೆಕ್ಟ್‌, ಜಾಬರ್ಸ್‌, ನಕಲು ಪ್ರತಿಗಳಿಗೆ ಇಂಜೆಕ್ಟ್‌ ಪ್ರಿಂಟರ್ಸ್‌ಗಳ ಬಳಕೆ ಹೆಚ್ಚುತ್ತಿದೆ. ಲೇಸರ್‌ ಪ್ರಿಂಟರ್ಸ್‌ಗಳು ಗರಿಷ್ಠ ವೇಗದಲ್ಲಿ ಕಾರ್ಯನಿರ್ವಹಿಸುತ್ತವೆ. ಸರ್ಕಾರ, ಐ.ಟಿ ಸಂಸ್ಥೆಗಳಿಗೆ ಇವುಗಳಿಗೆ ಬೇಡಿಕೆ ಇದೆ. ಪ್ರತಿ ಪ್ರಿಂಟ್‌ಗೆ ₹ 1 ವೆಚ್ಚವಾಗುತ್ತದೆ.

‘ಪ್ರಿಂಟರ್ಸ್‌ಗಳು ಈಗ ಪ್ರಿಂಟ್‌, ಸ್ಕ್ಯಾನರ್‌, ನಕಲು ಪ್ರತಿ ಸೇರಿದಂತೆ ಬಹು ಬಳಕೆಯ ಪಾತ್ರ ನಿರ್ವಹಿಸುತ್ತಿವೆ. ಪೂರ್ವ ನಿಗದಿತ ಟೆಂಪ್ಲೆಟ್ ಆಯ್ಕೆ ಮಾಡಿಕೊಂಡು ಹುಟ್ಟುಹಬ್ಬದ ಕಾರ್ಡ್‌ ಮುದ್ರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಆಯ್ದ ರಿಟೇಲ್‌ ಮಳಿಗೆಗಳಲ್ಲಿ ‘ಶಾಪ್‌ ಇನ್‌ ಶಾಪ್‌’ ಪರಿಕಲ್ಪನೆಯಡಿ, ‘ಪಿಕ್ಸ್‌ಮಾ (PIXMA) ಝೋನ್ಸ್‌’ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ 5 ಮತ್ತು ರಾಜ್ಯದಲ್ಲಿ 15 ಇಂತಹ ಝೋನ್ಸ್‌ ಆರಂಭಿಸಲಾಗಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು