ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ವಿಮೆಗೆ ತೆರಿಗೆ

Published 17 ಆಗಸ್ಟ್ 2023, 23:30 IST
Last Updated 17 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ವಾರ್ಷಿಕ ಪ್ರೀಮಿಯಂ ಮೊತ್ತವು ₹5 ಲಕ್ಷಕ್ಕಿಂತ ಹೆಚ್ಚಿರುವ ಜೀವ ವಿಮಾ ಪಾಲಿಸಿಗಳಿಂದ ಸಿಗುವ ಆದಾಯಕ್ಕೆ ತೆರಿಗೆಯನ್ನು ಲೆಕ್ಕಹಾಕುವ ಬಗೆಯನ್ನು ಆದಾಯ ತೆರಿಗೆ ಇಲಾಖೆಯು ಅಂತಿಮಗೊಳಿಸಿದೆ.

ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಜೀವ ವಿಮೆಯ ಪ್ರೀಮಿಯಂ ಮೊತ್ತವು ₹5 ಲಕ್ಷಕ್ಕಿಂತ ಹೆಚ್ಚು ಆಗಿದ್ದಲ್ಲಿ, ವಿಮಾ ಪಾಲಿಸಿಯನ್ನು 2023ರ ಏಪ್ರಿಲ್‌ 1ರ ನಂತರ ಪಡೆದಿದ್ದಲ್ಲಿ, ಆ ವಿಮೆಯ ಅವಧಿ ಪೂರ್ಣಗೊಂಡ ನಂತರದಲ್ಲಿ ಸಿಗುವ ಮೊತ್ತಕ್ಕೆ ತೆರಿಗೆ ಅನ್ವಯವಾಗುತ್ತದೆ.

ವಾರ್ಷಿಕ ಪ್ರೀಮಿಯಂ ಮೊತ್ತವು ₹ 5 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಜೀವ ವಿಮಾ ಪಾಲಿಸಿಗಳ ಅವಧಿ ಪೂರ್ಣಗೊಂಡ ನಂತರ ಸಿಗುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಈ ಬದಲಾವಣೆ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

ಪಾಲಿಸಿ ಹೊಂದಿರುವ ವ್ಯಕ್ತಿಯ ಮರಣದ ನಂತರದಲ್ಲಿ ಸಿಗುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT