ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮದು ಈರುಳ್ಳಿ ಖರೀದಿಗೆ ರಾಜ್ಯಗಳ ನಿರಾಸಕ್ತಿ

ಬೇಡಿಕೆ ಹಿಂದೆಪಡೆದ ಕೆಲವು ರಾಜ್ಯಗಳು: ಸಚಿವ ಪಾಸ್ವಾನ್
Last Updated 14 ಜನವರಿ 2020, 19:47 IST
ಅಕ್ಷರ ಗಾತ್ರ

ನವದೆಹಲಿ: ‘ಧಾರಣೆ ಏರುಮುಖವಾಗಿದ್ದರೂ ಆಮದಾಗಿರುವ ಈರುಳ್ಳಿ ಖರೀದಿಸಲು ರಾಜ್ಯಗಳು ಹಿಂದೇಟು ಹಾಕುತ್ತಿವೆ. ಇದು ಕೇಂದ್ರವನ್ನು ಚಿಂತೆಗೀಡು ಮಾಡಿದೆ’ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

‘ಪ್ರತಿ ಕೆ.ಜಿಗೆ ₹ 55ರಂತೆ ಸಾರಿಗೆ ವೆಚ್ಚವಿಲ್ಲದೇ ಆಮದು ಈರುಳ್ಳಿಯನ್ನು ರಾಜ್ಯಗಳಿಗೆ ನೀಡಲು ಕೇಂದ್ರ ಸಿದ್ಧವಾಗಿದೆ. ಆದರೆ, ರಾಜ್ಯಗಳು ಆಸಕ್ತಿ ತೋರಿಸುತ್ತಿಲ್ಲ. ಆಮದು ಸರಕನ್ನು ಹೆಚ್ಚು ದಿನ ಇಡಲು ಬರುವುದಿಲ್ಲ. ಹೀಗಾಗಿ ಆಮದಾಗಿರುವ ಸರಕನ್ನು ಖಾಲಿ ಮಾಡುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ’ ಎಂದಿದ್ದಾರೆ.

ಕಳೆದೆರಡು ತಿಂಗಳುಗಳಿಂದ ಕೆ.ಜಿಗೆ ₹ 100ನ್ನು ದಾಟಿದ್ದ ಧಾರಣೆ ಇದೀಗ ತುಸು ಇಳಿಕೆ ಕಾಣಲಾರಂಭಿಸಿದೆ. ಆಮದು ಮತ್ತು ಹೊಸ ಬೆಳೆ ಬರುತ್ತಿರುವುದು ಇದಕ್ಕೆ ಕಾರಣವಾಗಿದೆ.

ಆಮದಾಗಿರುವುದರ ರುಚಿ ದೇಶಿ ಈರುಳ್ಳಿಗಿಂತಲೂ ಭಿನ್ನವಾಗಿದೆ. ಜತೆಗೆ, ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ಇರುವುದರಿಂದ ಆಮದಾಗಿರುವ ಈರುಳ್ಳಿ ಖರೀದಿಸಲು ಜನ ಮುಂದಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಖರೀದಿಸಿರುವ ರಾಜ್ಯಗಳು: ಆಂಧ್ರ ಪ್ರದೇಶ, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT