ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

OpenAI: ಸಿಇಒ ಸ್ಥಾನದಿಂದ ಸ್ಯಾಮ್ ಆಲ್ಟ್‌ಮನ್‌ ವಜಾ

Published 18 ನವೆಂಬರ್ 2023, 6:03 IST
Last Updated 18 ನವೆಂಬರ್ 2023, 6:03 IST
ಅಕ್ಷರ ಗಾತ್ರ

ವಾಷಿಂಗ್ಟನ್: ಎಐ(AI) ಆಧಾರಿತ ಓಪನ್‌ಎಐ(OpenAI) ಕಂಪನಿಯು ಚಾಟ್‌ಜಿಪಿಟಿ (ChatGPT) ಸೃಷ್ಟಿಕರ್ತ ಹಾಗೂ ಸಿಇಒ ಸ್ಯಾಮ್ ಆಲ್ಟ್‌ಮನ್‌ ಅವರನ್ನು ವಜಾ ಮಾಡಿದೆ.

ಆಲ್ಟ್‌ಮನ್‌ ಅವರನ್ನು ವಜಾಗೊಳಿಸಿರುವುದು ಟೆಕ್ ವಲಯಗಳಲ್ಲಿ ಸಂಚಲನ ಮೂಡಿಸಿದೆ. ನಿನ್ನೆ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಡಳಿತ ಮಂಡಳಿಯ ಆಂತರಿಕ ಚರ್ಚೆಗಳಲ್ಲಿ ಆಲ್ಟ್‌ಮನ್‌ ಸರಿಯಾಗಿ ಮಾಹಿತಿ ಹಂಚಿಕೊಳ್ಳುತ್ತಿರಲಿಲ್ಲ ಮತ್ತು ಮಂಡಳಿಯ ನಿರ್ಧಾರಗಳಿಗೆ ಅಡ್ಡಿಪಡಿಸುತ್ತಿದ್ದರು. ಅವರು ಮಂಡಳಿಯೊಂದಿಗೆ ಪ್ರಾಮಾಣಿಕರಾಗಿರಲಿಲ್ಲ. ಅವರ ಮೇಲೆ ಕಂಪನಿಗೆ ಯಾವುದೇ ವಿಶ್ವಾಸ ಇಲ್ಲದಿರುವುದರಿಂದ ತಕ್ಷಣದಿಂದಲೇ ಅವರನ್ನು ವಜಾ ಮಾಡಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಓಪನ್‌ಎಐನಲ್ಲಿ ಕಳೆದ ಸಮಯ ನನಗೆ ಸಂತಸ ನೀಡಿದೆ. ಇಲ್ಲಿ ನಾನು ಅನೇಕ ಪ್ರತಿಭಾವಂತ ಜನರೊಂದಿಗೆ ಕೆಲಸ ಮಾಡಿದ್ದು ತೃಪ್ತಿ ತಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಲ್ಟ್‌ಮನ್‌ ಎಕ್ಸ್‌ ಮಾಡಿದ್ದಾರೆ.

ಓಪನ್‌ಎಐ ಮೈಕ್ರೋಸಾಫ್ಟ್‌ನಿಂದ ಧನಸಹಾಯ ಪಡೆದ ಕಂಪನಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT