ಮಂಗಳವಾರ, ಮೇ 24, 2022
30 °C

100 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆ ನೀಡಿದ ಐಟಿ ಕಂಪನಿ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಇಲ್ಲಿನ ಐಟಿ–ಎಂಜಿನಿಯರಿಂಗ್‌ ಕಂಪನಿ ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. 

ಕಂಪನಿಗಾಗಿ ಉದ್ಯೋಗಿಗಳು ನೀಡಿದ ಬೆಂಬಲ, ಪರಿಶ್ರಮ, ಅವರ ಕೊಡುಗೆಗಳನ್ನು ಪರಿಗಣಿಸಿ 100 ಉದ್ಯೋಗಿಗಳಿಗೆ ಕಾರುಗಳನ್ನು ನೀಡಲಾಗಿದೆ ಎಂದು ‘ಐಡಿಯಾಸ್‌2ಐಟಿ‘ ಕಂಪನಿ ತಿಳಿಸಿದೆ.

ಇಲ್ಲಿನ ಪ್ರಧಾನ ಕಚೇರಿಯಲ್ಲಿ ಕಂಪನಿಯ ಸಂಸ್ಥಾಪಕ ಮುಖ್ಯಸ್ಥರಾದ ಮುರಳಿ ವಿವೇಕಾನಂದನ್‌ ಅವರು ‘ಲಾಭಾಂಶ ಹಂಚಿಕೆ‘ ಕಾರ್ಯಕ್ರಮದಲ್ಲಿ ಉದ್ಯೋಗಿಗಳಿಗೆ ಕಾರುಗಳನ್ನು ವಿತರಣೆ ಮಾಡಿದ್ದಾರೆ.

ಕಂಪನಿಯ ಬೆಳವಣಿಗೆ ಹಾಗೂ ಆದಾಯವನ್ನು ಪರಿಗಣಿಸಿ ‘ಸಂಪತ್ತು ಹಂಚಿಕೆ‘ ಉಪಕ್ರಮದ ಅಡಿಯಲ್ಲಿ ಮೊದಲ ಬಾರಿಗೆ ಉದ್ಯೋಗಿಗಳಿಗೆ ಕಾರುಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಉಪಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗಾಯತ್ರಿ ವಿವೇಕಾನಂದನ್‌ ತಿಳಿಸಿದ್ದಾರೆ. 

ಐಟಿ–ಎಂಜಿನಿಯರಿಂಗ್‌ ಸೇವೆ ಒದಗಿಸುವ ಈ ಕಂಪನಿ 2009ರಲ್ಲಿ ಸ್ಥಾ‍ಪನೆಯಾಯಿತು. ಕೇವಲ 6 ಜನ ಉದ್ಯೋಗಿಗಳಿಂದ ಆರಂಭವಾದ ಈ ಕಂಪನಿ ಇಂದು 500ಕ್ಕೂ ಹೆಚ್ಚು ತಂತ್ರಜ್ಞರನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳು ಸೇರಿದಂತೆ ಅಮೆರಿಕ, ಮೆಕ್ಸಿಕೊ ದೇಶಗಳಲ್ಲೂ ಶಾಖೆಗಳನ್ನು ತೆರೆದಿದೆ. 

ಇದನ್ನೂ ಓದಿ: ಡಾ.ರಾಜ್‌ಕುಮಾರ್‌ 16ನೇ ವರ್ಷದ ಪುಣ್ಯಸ್ಮರಣೆ: ಬೊಮ್ಮಾಯಿ ಸೇರಿ ಗಣ್ಯರಿಂದ ನಮನ

‘ಐಡಿಯಾಸ್2ಐಟಿ‘ ಕಂಪನಿಯು ಫೇಸ್‌ಬುಕ್‌, ಮೈಕ್ರೊಸಾಪ್ಟ್‌, ಓರಾಕಲ್‌, ಮೊಟೊರಲಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ವಿವಿಧ ಕಂಪನಿಗಳಿಗೆ ಎಂಜಿನಿಯರಿಂಗ್‌ ಹಾಗೂ ಐಟಿ ಸೇವೆಗಳನ್ನು ನೀಡುತ್ತಿದೆ.

ಇದನ್ನೂ ಓದಿ:  ಮಾಗಡಿ‌: ಭೂಮಿ ಹದಗೊಳಿಸುವಾಗ ಪತ್ತೆಯಾಯ್ತು ಪುರಾತನ ಕಾಲದ ಸಿಹಿನೀರಿನ ಬಾವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು