ಶುಕ್ರವಾರ, ಸೆಪ್ಟೆಂಬರ್ 25, 2020
22 °C

ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಗೆ 78 ವರ್ಷಗಳು ಆಗಿರುವ ಸಂದರ್ಭದಲ್ಲಿ, ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಉದ್ದೇಶದಿಂದ ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಭಾನುವಾರ ‘ಚೀನಾ, ಭಾರತದಿಂದ ತೊಲಗಲಿ’ ಎನ್ನುವ ಚಳವಳಿಗೆ ಚಾಲನೆ ನೀಡಿದೆ.

ಒಕ್ಕೂಟದ ಸದಸ್ಯರು ದೇಶದ 600 ಕಡೆಗಳಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ಚೀನಾದಿಂದ ಆಮದಾಗುವ ವಸ್ತುಗಳ ಪ್ರಮಾಣ ಕಡಿಮೆ ಮಾಡುವ ಹಾಗೂ ಭಾರತದಲ್ಲಿ ಚೀನಾದ ಪ್ರಭಾವವನ್ನು ತಗ್ಗಿಸುವ ತುರ್ತು ಅಗತ್ಯ ಎದುರಾಗಿದೆ ಎಂದು ಒಕ್ಕೂಟ ಹೇಳಿದೆ.

‘ಚೀನಾದ ಹಲವು ಕಂಪನಿಗಳು ಭಾರತದ ನವೋದ್ಯಮಗಳಲ್ಲಿ ಗಣನೀಯ ಹೂಡಿಕೆ ಮಾಡಿವೆ. ಚೀನಾದ ಹೂಡಿಕೆದಾರರನ್ನು ಹೊರಗೆ ಇರಿಸುವಂತೆ ಈ ನವೋದ್ಯಮಗಳಿಗೆ ಸೂಚಿಸಬೇಕು. ಇವುಗಳಲ್ಲಿ ಭಾರತೀಯರೇ ಹೂಡಿಕೆ ಮಾಡುವಂತೆ ಆಗಲು ಆಕರ್ಷಕ ನೀತಿಯನ್ನು ಸರ್ಕಾರ ಘೋಷಿಸಬೇಕು’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಒತ್ತಾಯಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು