ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ ಚೇತರಿಕೆಗೆ ಬಡ್ಡಿದರ ಇಳಿಸಿದ ಚೀನಾ

Published 20 ಫೆಬ್ರುವರಿ 2024, 13:58 IST
Last Updated 20 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ಬೀಜಿಂಗ್‌: ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾವು, ಮಂಗಳವಾರ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ.

ಐದು ವರ್ಷಗಳ ಅವಧಿಯ ಸಾಲದ ಬಡ್ಡಿದರವನ್ನು ಶೇ 4.2ರಿಂದ ಶೇ 3.95ಕ್ಕೆ ಇಳಿಸಲಾಗಿದೆ. ಒಂದು ವರ್ಷ ಅವಧಿಯ ಕಾರ್ಪೊರೇಟ್‌ ಸಾಲದ ಬಡ್ಡಿದರ ಶೇ 3.45ರಷ್ಟಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಬ್ಯಾಂಕ್ ತಿಳಿಸಿದೆ.

ದೇಶದ ವಸತಿ ವಲಯದ ಬೆಳವಣಿಗೆಯು ಇಳಿಮುಖವಾಗಿದೆ. ನಿರುದ್ಯೋಗ ಪ್ರಮಾಣವೂ ಹೆಚ್ಚುತ್ತಿದೆ. ಜಾಗತಿಕ ಆರ್ಥಿಕತೆಯ ಮಂದಗತಿ ಬೆಳವಣಿಗೆಯಿಂದಾಗಿ ಚೀನಿ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಹಾಗಾಗಿ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾವು, ಬಡ್ಡಿದರ ಇಳಿಸುವ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT