ಮಂಗಳವಾರ, ಜೂನ್ 15, 2021
23 °C

ಬೈಟ್‌ಡಾನ್ಸ್ ಸಿಇಒ ಹುದ್ದೆಯಿಂದ ಝಾಂಗ್ ನಿರ್ಗಮನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಚೀನಾದ ತಂತ್ರಜ್ಞಾನ ಕ್ಷೇತ್ರದ ಕಂಪನಿ ಬೈಟ್‌ಡಾನ್ಸ್‌ನ ಸಹಸಂಸ್ಥಾಪಕ ಝಾಂಗ್‌ ಯಿಮಿಂಗ್‌ ಅವರು ಕಂ‍ಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಝಾಂಗ್‌ ಅವರು ಚೀನಾದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ವಿಶ್ವದ ಅತಿದೊಡ್ಡ ಯೂನಿಕಾರ್ನ್‌ ಎಂಬ ಹೆಗ್ಗಳಿಕೆ ಬೈಟ್‌ಡಾನ್ಸ್‌ ಕಂಪನಿಗೆ ಇದೆ. ಕಿರು ವಿಡಿಯೊಗಳನ್ನು ಹಂಚಿಕೊಳ್ಳುವ ಜನಪ್ರಿಯ ಆ್ಯಪ್‌ ‘ಟಿಕ್‌ಟಾಕ್‌’ ರೂಪಿಸಿದ್ದು ಇದೇ ಕಂಪನಿ. ಸಿಇಒ ಹುದ್ದೆಯಿಂದ ಕೆಳಗಿಳಿಯುವ ತೀರ್ಮಾನ ಪ್ರಕಟಿಸುವ ಮೂಲಕ ಝಾಂಗ್ ಅವರು, ಉನ್ನತ ಹುದ್ದೆ ತೊರೆಯುತ್ತಿರುವ ಚೀನಾದ ಕೆಲವು ಉದ್ಯಮಿಗಳ ಸಾಲಿಗೆ ಸೇರಿದ್ದಾರೆ.

ಚೀನಾದ ಅಲಿಬಾಬಾ ಕಂಪನಿಯ ಸಂಸ್ಥಾಪಕ ಜಾಕ್ ಮಾ ಅವರು ಹಿಂದಿನ ವರ್ಷದ ಮೇ ತಿಂಗಳಿನಲ್ಲಿ ಕಂಪನಿಯ ಉನ್ನತ ಹುದ್ದೆಯಿಂದ ನಿರ್ಗಮಿಸಿದ್ದರು. ಝಾಂಗ್ ಅವರ ಹಠಾತ್ ನಿರ್ಧಾರ ಕೂಡ ಜಾಕ್ ಮಾ ಅವರ ನಿರ್ಧಾರದ ಮಾದರಿಯಲ್ಲಿಯೇ ಇದೆ. ಜಾಕ್ ಮಾ ಅವರ ನಿರ್ಧಾರ ಪ್ರಕಟವಾದ ನಂತರ, ‘ಚೀನಾದಲ್ಲಿ ವಾಣಿಜ್ಯ ವಹಿವಾಟು ನಡೆಸುವುದು ಕಷ್ಟವಾಗುತ್ತಿದೆ’ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಬೈಟ್‌ಡಾನ್ಸ್‌ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಆಗಿರುವ ಲಿಯಾಂಗ್ ರುಬೊ ಅವರು ಝಾಂಗ್ ಅವರ ನಂತರ ಸಿಇಒ ಹುದ್ದೆಗೆ ಬರಲಿದ್ದಾರೆ. ಬೈಟ್‌ಡಾನ್ಸ್‌ನ ಟಿಕ್‌ಟಾಕ್‌ ಆ್ಯಪ್‌ಗೆ ಭಾರತದಲ್ಲಿ ನಿಷೇಧ ಹೇರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು