ನವದೆಹಲಿ: ಶುದ್ಧ ಇಂಧನ ಗುರಿ ತಲುಪಲು, ಜಾಗತಿಕವಾಗಿ ಶುದ್ಧ ಇಂಧನ ಕ್ಷೇತ್ರದಲ್ಲಿನ ಹೂಡಿಕೆಯು 2030ರ ವೇಳೆಗೆ ವಾರ್ಷಿಕವಾಗಿ ₹9 ಲಕ್ಷ ಕೋಟಿಗೆ ಹೆಚ್ಚಾಗುವ ಅಗತ್ಯವಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವರದಿ ಗುರುವಾರ ತಿಳಿಸಿದೆ.

ಶುದ್ಧ ಇಂಧನವು, ಇಂಧನ ಭದ್ರತೆ ಮತ್ತು ಆರ್ಥಿಕ ಪ್ರಗತಿಯ ಗುರಿಯನ್ನು ಬಲಪಡಿಸಲಿದೆ. ಸಾಂಪ್ರದಾಯಿಕ ಇಂಧನದ ವಲಯಕ್ಕಿಂತ ಎರಡರಿಂದ ಮೂರುಪಟ್ಟು ಹೆಚ್ಚು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿದೆ ಮತ್ತು ಇಂಧನ ಪೂರೈಕೆಯನ್ನು ವೈವಿಧ್ಯಗೊಳಿಸಬಹುದು ಎಂದು ಹೇಳಿದೆ.

ಪ್ರಸ್ತುತ ಶುದ್ಧ ಇಂಧನ ಕ್ಷೇತ್ರದಲ್ಲಿ ಪ್ರತಿ ವರ್ಷ ₹2.25 ಲಕ್ಷ ಕೋಟಿ ಹೂಡಿಕೆ ಇದೆ. ಇದು ಜಾಗತಿಕವಾಗಿ ಈ ವಲಯದಲ್ಲಿ ಹೂಡಿಕೆಯ ಪ್ರಮಾಣ ಶೇ 1ರಷ್ಟಿದೆ. ಜಾಗತಿಕ ಶುದ್ಧ ಇಂಧನ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಇದನ್ನು ನಾಲ್ಕು ಪಟ್ಟು ಹೆಚ್ಚಳ ಮಾಡಬೇಕಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.