ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Commercial LPG gas price: ವಾಣಿಜ್ಯ ಬಳಕೆಯ ಸಿಲಿಂಡರ್ ದರ ₹100 ಇಳಿಕೆ

Published 1 ಆಗಸ್ಟ್ 2023, 5:10 IST
Last Updated 1 ಆಗಸ್ಟ್ 2023, 5:10 IST
ಅಕ್ಷರ ಗಾತ್ರ

ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಆಗಸ್ಟ್‌ 1 ರಿಂದ ಜಾರಿಗೆ ಬರುವಂತೆ ₹ 99.75 ಇಳಿಕೆ ಮಾಡಲಾಗಿದೆ.

ದರ ಇಳಿಕೆಯಿಂದಾಗಿ ದೆಹಲಿಯಲ್ಲಿ 19 ಕೆ.ಜಿಯ ಸಿಲಿಂಡರ್‌ ಬೆಲೆ ₹ 1680ಕ್ಕೆ ತಲುಪಿದೆ.

ಕೋಲ್ಕತ್ತ, ಮುಂಬೈ ಹಾಗೂ ಚೆನ್ನೈನಲ್ಲಿ 19 ಕೆ.ಜಿ ಸಿಲಿಂಡರ್‌ ದರ ಕ್ರಮವಾಗಿ ₹ 1,802.50, ₹ 1,640.50, ಹಾಗೂ ₹ 1,852.50ಗೆ ಇಳಿಕೆಯಾಗಿದೆ.

ಪ್ರತಿ ತಿಂಗಳ ಮೊದಲನೆ ದಿನ ಎಲ್‌ಪಿಜಿ ದರ ಪರಿಷ್ಕರಣೆಯಾಗುತ್ತದೆ.

ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿದ್ದರೆ, ಜೂನ್‌ನಲ್ಲಿ ಏರಿಸಲಾಗಿತ್ತು.

ಏತನ್ಮಧ್ಯೆ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ಯಥಾಸ್ಥಿತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT