ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹101ರಷ್ಟು ಹೆಚ್ಚಳ

Published 1 ನವೆಂಬರ್ 2023, 3:23 IST
Last Updated 1 ನವೆಂಬರ್ 2023, 3:23 IST
ಅಕ್ಷರ ಗಾತ್ರ

ಮುಂಬೈ: ಸರ್ಕಾರಿ ಸ್ವಾಮ್ಯ ಅನಿಲ ಕಂಪನಿಗಳು ಇಂದಿನಿಂದ (ನ. 1) ಅನ್ವಯವಾಗುವಂತೆ 19 ಕೆ.ಜಿ.ಯ ಪ್ರತಿ ಅಡುಗೆ ಸಿಲಿಂಡರ್ ಮೇಲಿನ ಬೆಲೆಯನ್ನು ₹101.5ಕ್ಕೆ ಹೆಚ್ಚಿಸಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ಗಳು ದರ ಪರಿಷ್ಕರಣೆ ಮಾಡಿವೆ. ಇದರಿಂದಾಗಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿ ಹೆಚ್ಚಳವಾಗಿದೆ. ಈ ಮೊದಲು ಮುಂಬೈನಲ್ಲಿ ಪ್ರತಿ ಸಿಲಿಂಡರ್ ಬೆಲೆ ₹ 1,684 ಇತ್ತು.

ಈ ಏರಿಕೆಯಿಂದಾಗಿ 19 ಕೆ.ಜಿ. ಸಿಲಿಂಡರ್‌ ಬೆಲೆ ₹1,785ರಷ್ಟಾಗಿದೆ. ದೆಹಲಿಯಲ್ಲಿ ₹ 1,833 (ಈ ಮೊದಲು ₹ 1,731), ಕೊಲ್ಕತ್ತದಲ್ಲಿ ₹ 1,943 (₹ 1,898) ಏರಿಕೆಯಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹ 209ರಷ್ಟು ಹೆಚ್ಚಾಗಿದ್ದು, ಅಲ್ಲಿ ಈಗ ಪ್ರತಿ ಸಿಲಿಂಡರ್‌ ₹ 1,999.50ಕ್ಕೆ ಏರಿಕೆಯಾಗಿದೆ.

ಗೃಹ ಬಳಕೆಯ ಅಡುಗೆ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ದೆಹಲಿಯಲ್ಲಿ 14.2 ಕೆ.ಜಿ. ಸಿಲಿಂಡರ್ ಬೆಲೆ ₹ 903ರಷ್ಟಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT