ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಗೆ ವೆಚ್ಚ ನಿಗದಿ: ಕಿರಣ್ ಮಜುಂದಾರ್‌ ಷಾ ಆಕ್ರೋಶ

Last Updated 28 ಫೆಬ್ರುವರಿ 2021, 16:07 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ಲಸಿಕೆಗೆ ₹ 250ರ ಮಿತಿ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್‌ ಷಾ ವಿರೋಧಿಸಿದ್ದಾರೆ.

‘ಲಸಿಕೆ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಬದಲು ನಾವು ಅದನ್ನು ಹೊಸಕಿ ಹಾಕುತ್ತಿದ್ದೇವೆ’ ಎಂದು ಕಿರಣ್ ಅವರು ಟ್ವೀಟ್ ಮಾಡಿದ್ದಾರೆ. ‘ಲಸಿಕೆಗೆ ನಿಗದಿ ಮಾಡಿರುವ ಬೆಲೆಯು ತೀರಾ ಕಡಿಮೆ. ಲಸಿಕೆ ಕಂಪನಿಗಳಿಗೆ ಮೋಸಹೋದಂತಹ ಅನುಭವ ಆಗುತ್ತಿದೆ’ ಎಂದು ಕೂಡ ಅವರು ಹೇಳಿದ್ದಾರೆ.

ಸರ್ಕಾರ ನಿಗದಿ ಮಾಡಿರುವ ₹ 250ರಲ್ಲಿ, ಒಂದು ಡೋಸ್ ಲಸಿಕೆಯ ವೆಚ್ಚ ₹ 150 ಹಾಗೂ ಸೇವಾ ಶುಲ್ಕ ₹ 100 ಸೇರಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT