ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಸಮುದ್ರ ಬಿಕ್ಕಟ್ಟು: ಆರ್ಥಿಕತೆ ಬೆಳವಣಿಗೆಗೆ ಅಡ್ಡಿ

Published 23 ಮಾರ್ಚ್ 2024, 16:25 IST
Last Updated 23 ಮಾರ್ಚ್ 2024, 16:25 IST
ಅಕ್ಷರ ಗಾತ್ರ

ನವದೆಹಲಿ: ಕೆಂಪು ಸಮುದ್ರದ ಬಿಕ್ಕಟ್ಟಿನಿಂದಾಗಿ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದು ಭಾರತದಲ್ಲಿ ಹಣದುಬ್ಬರ ಏರಿಕೆ ಹಾಗೂ ಆರ್ಥಿಕತೆಯ ಬೆಳವಣಿಗೆಗೆ ಅಡ್ಡಿ ಉಂಟು ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಆರ್ಥಿಕ ಸಚಿವಾಲಯದ ಮಾಸಿಕ ವರದಿ ಹೇಳಿದೆ. ‌

ಯೂರೋಪ್‌ ದೇಶಗಳಿಗೆ ಭಾರತದ ರಫ್ತು ಹಾಗೂ ಆಮದು ವಹಿವಾಟು ಕೆಂಪು ಸಮುದ್ರದ ಮೂಲಕವೇ ನಡೆಯುತ್ತದೆ. ಆದರೆ, ಬಿಕ್ಕಟ್ಟು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ಕಚ್ಚಾತೈಲ, ಆಟೊಮೊಬೈಲ್‌, ರಸಗೊಬ್ಬರ, ಜವಳಿ, ಕಬ್ಬಿಣ ಮತ್ತು ಉಕ್ಕು ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.

ಸಾಗಣೆ ಹಾಗೂ ವಿಮಾ ವೆಚ್ಚವು ಏರಿಕೆಯಾಗಿದೆ. ಅಲ್ಲದೆ, ಸಾಗಣೆಯ ಅವಧಿ ಹೆಚ್ಚುತ್ತಿದೆ. ಇದರಿಂದ ಆಮದು ಉತ್ಪನ್ನಗಳ ಬೆಲೆ ದುಬಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ‌

ಭಾರತವು ಜೋರ್ಡಾನ್‌ ಹಾಗೂ ಇಸ್ರೇಲ್‌ನಿಂದ ಎಂಒಪಿ (ಮ್ಯೂರೇಟ್‌ ಆಫ್‌ ಪೊಟ್ಯಾಷ್‌) ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತದೆ. ಮಧ್ಯಪ್ರಾಚ್ಯ ಹಾಗೂ ಕೆಂಪು ಸಮುದ್ರದ ಬಿಕ್ಕಟ್ಟು ರಸಗೊಬ್ಬರದ ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. 

ಚೀನಾ, ಜಪಾನ್‌, ಭಾರತ ಹಾಗೂ ದಕ್ಷಿಣ ಕೊರಿಯಾ ದೇಶಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲವನ್ನು ಆಮದುಕೊಳ್ಳುತ್ತವೆ. ಹಡಗುಗಳ ಸಂಚಾರದಲ್ಲಿ ಆಗಿರುವ ಅಡಚಣೆಯು ಈ ರಾಷ್ಟ್ರಗಳ ಆರ್ಥಿಕತೆ ಬೆಳವಣಿಗೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಇಂಧನ ಬೆಲೆ ಏರಿಕೆಯಾಗಲಿದ್ದು, ಇದು ಹಣದುಬ್ಬರಕ್ಕೆ ದಾರಿಯಾಗಲಿದೆ ಎಂದು ತಿಳಿಸಿದೆ.‌‌

ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಯೆಮನ್‌ನ ಹುಥಿ ಬಂಡುಕೋರರು ನಡೆಸುತ್ತಿರುವ ದಾಳಿಯಿಂದಾಗಿ ಬಿಕ್ಕಟ್ಟು ತಲೆದೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT