ಶನಿವಾರ, ಅಕ್ಟೋಬರ್ 19, 2019
22 °C

ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 

Published:
Updated:

ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುವುದನ್ನು ತಡೆಯಲು ಕೇಂದ್ರ ಸರ್ಕಾರವು ಹಲವು ಕ್ರಮಗಳಿಗೆ ಮುಂದಾಗಿದ್ದು ದೇಶಿಯ ಹಾಗೂ ಹೊಸದಾಗಿ ಸ್ಥಾಪನೆಯಾಗುವ ಕಂಪನಿಗಳ ಮೇಲಿನ ಕಾರ್ಪೊರೇಟ್‌ ತೆರಿಗೆಯನ್ನು ಕಡಿತ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಘೋಷಣೆ ಮಾಡಿದ್ದಾರೆ. 

ಇದನ್ನೂ ಓದಿ: 6 ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ತಲುಪಿದೆ ಆರ್ಥಿಕ ವೃದ್ಧಿ ದರ

ದೇಶಿಯ ಕಂಪನಿಗಳು ಹಾಗೂ ಹೊಸದಾಗಿ ಸ್ಥಾಪನೆಯಾಗುವ ಕಂಪನಿಗಳಿಗೆ ಇದು ಅನ್ವಯಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಶೇ 30 ರಷ್ಟಿದ್ದ  ಕಾರ್ಪೊರೇಟ್‌ ತೆರಿಗೆಯನ್ನು ಶೇ 25.2ಕ್ಕೆ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ: ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ಕನಸಿಗೆ ಗುಡ್ ಬೈ ಹೇಳಿ: ಸುಬ್ರಮಣಿಯನ್ ಸ್ವಾಮಿ

ಮುಂಬರುವ ಅಕ್ಟೋಬರ್‌ ತಿಂಗಳಿಂದ ಆರಂಭವಾಗುವ ಹೊಸ ಕಂಪನಿಗಳ ಮೇಲಿನ ಆದಾಯ ತೆರಿಗೆಯನ್ನು ಶೇ 15ಕ್ಕೆ ಇಳಿಕೆ ಮಾಡಲಾಗಿದೆ. ಇದು 2023ರ ಮಾರ್ಚ್‌ 31ರೊಳಗೆ ಸ್ಥಾಪನೆಯಾಗುವ ನೂತನ ಕಂಪನಿಗಳಿಗೆ ಮಾತ್ರ ಅನ್ವಯವಾಗಲಿದೆ. 

ಷೇರು ಪೇಟೆಯಲ್ಲಿ ಚೇತರಿಕೆ

ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್‌ ತೆರಿಗೆ ಕಡಿತದ ಘೋಷಣೆ ಮಾಡುತ್ತಿದ್ದಂತೆ ಷೇರು ಪೇಟೆಯಲ್ಲಿ ಚೇತರಿಕೆ ಕಂಡುಬಂತು. ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,926 ಪಾಯಿಂಟ್​ ಹೆಚ್ಚಳವಾದರೆ, ನಿಫ್ಟಿ ಸೂಚ್ಯಂಕ ಕೂಡ ಸುಮಾರು 562 ಅಂಕಗಳಷ್ಟು ಹೆಚ್ಚಾಗಿದೆ. 

ಇದನ್ನೂ ಓದಿ: ಆರ್ಥಿಕ ಹಿಂಜರಿತ: ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

Post Comments (+)