ಗುರುವಾರ , ಏಪ್ರಿಲ್ 22, 2021
29 °C

ಕೇಂದ್ರೋದ್ಯಮಗಳ ಇಟಿಎಫ್‌: 6ನೇ ಕಂತು ಜುಲೈ 18ರಂದು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರೋದ್ಯಮಗಳ (ಸಿಪಿಎಸ್‌ಇ) ವಿನಿಮಯ ವಹಿವಾಟು ನಿಧಿಯ (ಇಟಿಎಫ್‌) ಆರನೇ ಕಂತು ಜುಲೈ 18ರಂದು ಬಿಡುಗಡೆಯಾಗಲಿದೆ. 

ಈ ಕಂತಿನಲ್ಲಿ ₹ 10 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಒಎನ್‌ಜಿಸಿ, ಎನ್‌ಟಿಪಿಸಿ, ಕೋಲ್‌ ಇಂಡಿಯಾ, ಐಒಸಿ, ರೂರಲ್‌ ಎಲೆಕ್ಟ್ರಿಫಿಕೇಷನ್‌ ಕಾರ್ಪ್‌, ಪವರ್ ಫೈನಾನ್ಸ್‌ ಕಾರ್ಪ್‌, ಭಾರತ್‌ ಎಲೆಕ್ಟ್ರಾನಿಕ್ಸ್‌, ಆಯಿಲ್‌ ಇಂಡಿಯಾ, ಎನ್‌ಬಿಸಿಸಿ ಇಂಡಿಯಾ ಮತ್ತು ಎಸ್‌ಜೆವಿಎನ್‌ ಷೇರುಗಳು ವಹಿವಾಟಿಗೆ ಬಿಡುಗಡೆ ಆಗಲಿವೆ.

ಆರಂಭಿಕ ಹೂಡಿಕೆದಾರರಿಗೆ ಜುಲೈ 18ರಂದು ಮತ್ತು ಬೇರೆ ಹೂಡಿಕೆದಾರರಿಗೆ ಜುಲೈ 19ರಂದು ಖರೀದಿಗೆ ಅವಕಾಶ ಸಿಗಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದಿಂದ ₹ 1.05 ಲಕ್ಷ ಕೋಟಿ ಸಂಗ್ರಹಿಸಲು ಉದ್ದೇಶಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹ 85 ಸಾವಿರ ಕೋಟಿ ಸಂಗ್ರಹಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು