ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫೆಬ್ರುವರಿಯ ಕಚ್ಚಾತೈಲ ಸಂಸ್ಕರಣೆ ನಾಲ್ಕು ತಿಂಗಳ ಕನಿಷ್ಠ

Published : 20 ಮಾರ್ಚ್ 2021, 12:20 IST
ಫಾಲೋ ಮಾಡಿ
Comments

ನವದೆಹಲಿ: ದೇಶದಲ್ಲಿ ಕಚ್ಚಾತೈಲ ಸಂಸ್ಕರಣೆಯು ಫೆಬ್ರುವರಿಯಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಕಚ್ಚಾತೈಲ ದರ ಏರಿಕೆ ಮತ್ತು ಇಂಧನ ಬೇಡಿಕೆ ತಗ್ಗಿರುವುದರಿಂದ ಸಂಸ್ಕರಣೆಯಲ್ಲಿ ಇಳಿಕೆ ಆಗಿದೆ.

ಫೆಬ್ರುವರಿಯಲ್ಲಿನ ಕಚ್ಚಾತೈಲ ಸಂಸ್ಕರಣೆಯು ವರ್ಷದಿಂದ ವರ್ಷಕ್ಕೆ ಶೇ 8.8ರಷ್ಟು ಇಳಿಕೆ ಆಗಿದ್ದು ದಿನಕ್ಕೆ 48.7 ಲಕ್ಷ ಬ್ಯಾರಲ್‌ಗಳಷ್ಟಾಗಿದೆ ಎಂದು ಸರ್ಕಾರ ಪ್ರಾಥಮಿಕ ಮಾಹಿತಿ ನೀಡಿದೆ.

ತಿಂಗಳವಾರು ಆಧಾರದಲ್ಲಿ ಶೇ 5.6ರಷ್ಟು ಇಳಿಕೆಯಾಗಿದೆ. ಫೆಬ್ರುವರಿಯಲ್ಲಿ ಇಂಧನ ಬಳಕೆಯು ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ತೈಲ ಬೆಲೆ ಹೆಚ್ಚಾಗುತ್ತಿರುವುದರಿಂದ ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಸೌದಿ ಅರೇಬಿಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವನ್ನು ಮೇ ತಿಂಗಳಿನಲ್ಲಿ ಶೇಕಡ 25ರಷ್ಟು ಕಡಿಮೆ ಮಾಡಲು ಚಿಂತನೆ ನಡೆಸಿವೆ.

ತೈಲ ದರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ತೈಲ ಸಂಸ್ಕರಣೆ ತಗ್ಗಿದೆ ಎಂದು ರಿಫಿನಿಟಿವ್‌ ಕಂಪನಿಯ ವಿಶ್ಲೇಷಕ ಎಹ್ಸಾನ್ ಉಲ್‌ ಹಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT