ನವದೆಹಲಿ: ಅಕ್ರಮವಾಗಿ ಆಮದಾಗಿದ್ದ ₹2 ಕೋಟಿ ಮೌಲ್ಯದ 12.22 ಲಕ್ಷ ವಿದೇಶಿ ಸಿಗರೇಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡಿದ್ದಾರೆ.
ಕತ್ರಾ ಬರಿಯನ್, ನಯಾಬನ್ಸ್, ದೆಹಲಿ-06 ಪ್ರದೇಶದಲ್ಲಿ ಎರಡು ಅಂಗಡಿಗಳು ಮತ್ತು ಮೂರು ಗೋಡೌನ್‌ಗಳನ್ನು ಶೋಧಿಸಲಾಗಿದೆ.
ಸಿಗರೇಟ್ ಪ್ಯಾಕೆಟ್‌ಗಳು ಯಾವುದೇ ನಿರ್ದಿಷ್ಟವಾದ ಶಾಸನಬದ್ಧ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿಲ್ಲ. ಈ ಸಿಗರೇಟ್‌ಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಎಂದು ಶಂಕಿಸಲಾಗಿದೆ. ಕಸ್ಟಮ್ಸ್ ಸುಂಕವನ್ನು ತಪ್ಪಿಸಿ, ನಿಯಮ ಉಲ್ಲಂಘಿಸಿ ದೇಶೀಯ ಮಾರುಕಟ್ಟೆಗೆಮ ಈ ಸಿಗರೇಟುಗಳನ್ನು ಸರಬರಾಜು ಮಾಡಲಾಗುತ್ತಿದೆ.
ಪ್ರಕರಣದಲ್ಲಿ ಪೂರೈಕೆದಾರರು/ವಿತರಕರು ಮತ್ತು ಇತರ ದಲ್ಲಾಳಿಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.