ನವದೆಹಲಿ: ‘ಅಂಚೆ ಇಲಾಖೆಯಲ್ಲಿ ವಾಣಿಜ್ಯ ವಹಿವಾಟು ಹೆಚ್ಚಳಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಶೀಘ್ರವೇ ಇಲಾಖೆಯ ಡಿಜಿಟಲೀಕರಣಕ್ಕೆ ಸರ್ಕಾರ ಕ್ರಮಕೈಗೊಳ್ಳಲಿದೆ’ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಶನಿವಾರ ನಡೆದ ಭಾರತೀಯ ಅಂಚೆ ಮತ್ತು ದೂರಸಂಪರ್ಕ ಲೆಕ್ಕಪತ್ರ ಮತ್ತು ಹಣಕಾಸು ಸೇವೆಗಳ ಕಚೇರಿಯ 50ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ದೇಶದಲ್ಲಿ ಇ–ಕಾಮರ್ಸ್ ವಲಯವು ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಈ ವಹಿವಾಟಿನ ಹಾದಿಯಲ್ಲಿ ಸಾಗಲು ಅಂಚೆ ಕಚೇರಿಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗುವುದು’ ಎಂದರು.

ಇ–ಕಾಮರ್ಸ್ ವಲಯದ ಲಾಭ ಪಡೆಯಬೇಕಾದರೆ ನಾವು ಸಾಗಣೆ ಕಂಪನಿಯ ಮಾದರಿಯಲ್ಲಿ ಸೇವೆ ಒದಗಿಸಬೇಕಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಮುಂಚೂಣಿ ಸ್ಥಾನವನ್ನು ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದರು.

ದೇಶದಲ್ಲಿ 1.64 ಲಕ್ಷ ಅಂಚೆ ಕಚೇರಿಗಳಿವೆ. ಜಾಗತಿಕಮಟ್ಟದಲ್ಲಿ ಅತಿದೊಡ್ಡ ವಿತರಣಾ ಜಾಲ ಇದಾಗಿದೆ ಎಂದು ಹೇಳಿದರು.

‘ಗ್ರಾಮೀಣ ಅಂಚೆ ಸೇವಕರು ಮನೆಯಿಂದ ಮನೆಗೆ ಸೇವೆ ನೀಡುತ್ತಿದ್ದಾರೆ. ಹಾಗಾಗಿ, ಅಂಚೆ ಸೇವೆಯು ಜನ ಸೇವೆಯಾಗಿದೆ. ಎಲ್ಲಾ ನಾಗರಿಕರಿಗೆ ಡಿಜಿಟಲ್ ಸೇವೆ ತಲುಪಿಸುವ ಗುರಿ ಹೊಂದಲಾಗಿದೆ’ ಎಂದರು.

ಭಾರತವು ದೂರಸಂಪರ್ಕ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಭವಿಷ್ಯದ ಅಭಿವೃದ್ಧಿಗೆ ಅನ್ವೇಷಣೆ ಮತ್ತು ಭದ್ರತೆಗೆ ಒತ್ತು ನೀಡಿದೆ. ಐವತ್ತು ವರ್ಷಗಳಲ್ಲಿ ವಿವಿಧ ವಲಯದ ಮಧ್ಯಸ್ಥಗಾರರಿಗೆ ಅನುಪಮ ಕೊಡುಗೆ ನೀಡಿದೆ ಎಂದು ಹೇಳಿದರು.

‘ಭಾರತವು ಒಂದು ಕಾಲದಲ್ಲಿ ವಿದೇಶಿ ತಂತ್ರಜ್ಞಾನವನ್ನು ಅವಲಂಬಿಸಿತ್ತು. ಸ್ಥಿರ ದೂರವಾಣಿಗಳ ಸಂಖ್ಯೆ ಕಡಿಮೆ ಇತ್ತು. ಮೊಬೈಲ್ ತಂತ್ರಜ್ಞಾನವೂ ಸುಲಭವಾಗಿ ಬಳಕೆಗೆ ಸಿಗುತ್ತಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಅಂಚೆ ಮತ್ತು ದೂರಸಂಪರ್ಕ ಇಲಾಖೆಯು ಟೆಲಿಕಾಂ ವಲಯದ ಬಲವರ್ಧನೆಗೆ ಬೆನ್ನೆಲುಬಾಗಿದೆ. ಆರ್ಥಿಕ ಸಬಲೀಕರಣದಲ್ಲೂ ಮುಂಚೂಣಿಯಲ್ಲಿದೆ ಎಂದರು.

95.4 ಕೋಟಿ ಇಂಟರ್ನೆಟ್ ಬಳಕೆದಾರರು ಕಳೆದ ಒಂದು ದಶಕದ ಅವಧಿಯಲ್ಲಿ ಇಂಟರ್ನೆಟ್ ಮತ್ತು ಬ್ರ್ಯಾಂಡ್ಬಾಂಡ್ ಚಂದಾದಾರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು. ಹತ್ತು ವರ್ಷದ ಹಿಂದೆ 25 ಕೋಟಿ ಇಂಟರ್ನೆಟ್ ಬಳಕೆದಾರರಿದ್ದರು. ಪ್ರಸ್ತುತ ಚಂದಾದಾರರ ಸಂಖ್ಯೆ 95.4 ಕೋಟಿಗೆ ಮುಟ್ಟಿದೆ. ದೇಶದ ಪ್ರತಿ ಪ್ರಜೆಯ ಇಂಟರ್ನೆಟ್ ಬಳಕೆ ಪ್ರಮಾಣ 1ಜಿಬಿ ಆಗಿದೆ. ಸರಾಸರಿ ಬಳಕೆ 20 ಜಿಬಿಗೆ ಮುಟ್ಟಿದೆ. ಬ್ರ್ಯಾಂಡ್ಬಾಂಡ್ ಚಂದಾದಾರರ ಸಂಖ್ಯೆಯು 60 ಲಕ್ಷದಿಂದ 9.24 ಕೋಟಿಗೆ ಏರಿಕೆಯಾಗಿದೆ ಎಂದು ವಿವರಿಸಿದರು. ‘4ಜಿ ತಂತ್ರಜ್ಞಾನದಲ್ಲಿ ಭಾರತವು ವಿಶ್ವವನ್ನು ಅನುಸರಿಸಿತು. 5ಜಿ ತಂತ್ರಜ್ಞಾನದೊಟ್ಟಿಗೆ ಜಗತ್ತಿನ ಜೊತೆಗೆ ಹೆಜ್ಜೆ ಹಾಕಿತು. ಈಗ 6ಜಿ ತಂತ್ರಜ್ಞಾನ ಮುನ್ನಡೆಯಲ್ಲಿ ಭಾರತವು ಜಾಗತಿಕಮಟ್ಟದಲ್ಲಿ ನಾಯಕತ್ವ ವಹಿಸಿಕೊಳ್ಳಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.