ಮುಂಬೈ: ಫೇಮ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ಕಡಿತ ಮಾಡಿದ ನಂತರದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ (ಇ.ವಿ) ಬೇಡಿಕೆ ಕಡಿಮೆ ಆಗುತ್ತಿದೆ ಎಂದು ಕೇರ್ ರೇಟಿಂಗ್ಸ್ ಹೇಳಿದೆ. ಈಗ ದ್ವಿಚಕ್ರ ಇ.ವಿ. ತಯಾರಕರು ಹೊಸ ಸಂಶೋಧನೆಗಳ ಮೂಲಕ ಬೆಲೆ ತಗ್ಗಿಸಲು ಮುಂದಾಗಬೇಕಿದೆ ಎಂದು ಅದು ಹೇಳಿದೆ.