ಶುಕ್ರವಾರ, ಸೆಪ್ಟೆಂಬರ್ 25, 2020
25 °C

ನಿವೇಶನ ಮಾರಾಟಕ್ಕೂ ಜಿಎಸ್‌ಟಿ: ಎಎಆರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದ್ಯುತ್‌, ಚರಂಡಿ ವ್ಯವಸ್ಥೆ ಮತ್ತು ನೀರು ಪೂರೈಕೆಯಂತಹ ಪ್ರಾಥಮಿಕ ಸವಲತ್ತುಗಳಿರುವ ಭೂಮಿ ಮಾರಾಟ ಮಾಡಿದರೆ ಅದಕ್ಕೆ ಜಿಎಸ್‌ಟಿ ಕಟ್ಟಬೇಕಾಗುತ್ತದೆ ಎಂದು ಅಥಾರಿಟಿ ಫಾರ್‌ ಅಡ್ವಾನ್ಸ್‌ ರೂಲಿಂಗ್‌ (ಎಎಆರ್‌) ತಿಳಿಸಿದೆ.

ಅದೇ ರೀತಿ, ಅಭಿವೃದ್ಧಿಪಡಿಸಿರುವ ಫ್ಲ್ಯಾಟ್‌ಗಳು, ಮಾರಾಟದ ಉದ್ದೇಶದಿಂದ ನಿರ್ಮಾಣ ಮಾಡಿರುವ ಕಾಂಪ್ಲೆಕ್ಸ್‌ಗಳ ಸಾಲಿಗೆ ಬರಲಿದ್ದು, ಅದಕ್ಕೂ ಜಿಎಸ್‌ಟಿ ತೆರಬೇಕಾಗಲಿದೆ ಎಂದೂ ಹೇಳಿದೆ.

ಎಎಆರ್‌ನ ಗುಜರಾತ್‌ ನ್ಯಾಯಪೀಠಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಿದೆ.

‘ಇದು ರಿಯಲ್‌ ಎಸ್ಟೇಟ್‌ ವಲಯದ ಮೇಲೆ ಅಡ್ಡ ಪರಿಣಾಮ ಬೀರಲಿದೆ. ಈ ನಿರ್ಧಾರವು ಜಿಎಸ್‌ಟಿಯ ಮೂಲ ರಚನೆಯ ವಿರುದ್ಧವಾಗಿದೆ. ಸಂವಿಧಾನಾತ್ಮಕವಾಗಿ ಸ್ಥಿರಾಸ್ತಿಗಳಿಗೆ ತೆರಿಗೆ ವಿಧಿಸುವಂತಿಲ್ಲ’ ಎಂದು ಎಎಂಆರ್ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್‌ ಮೋಹನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು