ಮಂಗಳವಾರ, ಮಾರ್ಚ್ 21, 2023
20 °C

ಮಧ್ಯಪ್ರದೇಶ: ₹ 100ರ ಗಡಿ ದಾಟಿದ ಡೀಸೆಲ್‌ ದರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಭಾನುವಾರ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿವೆ. ಇದರಿಂದಾಗಿ ಮಧ್ಯಪ್ರದೇಶದಲ್ಲಿ ಡೀಸೆಲ್‌ ದರವು ₹ 100ರ ಗಡಿ ದಾಟಿದ್ದರೆ, ಸಿಕ್ಕಿಂನಲ್ಲಿ ಪೆಟ್ರೋಲ್‌ ದರವು ₹ 100ಕ್ಕಿಂತ ಜಾಸ್ತಿ ಆಗಿದೆ.

ತೈಲ ಕಂಪನಿಗಳು ಭಾನುವಾರ ಪೆಟ್ರೋಲ್‌ ದರವನ್ನು ಲೀಟರಿಗೆ 35 ಪೈಸೆ ಮತ್ತು ಡೀಸೆಲ್‌ ದರವನ್ನು 18 ಪೈಸೆ ಹೆಚ್ಚಿಸಿವೆ. ಎರಡು ತಿಂಗಳಲ್ಲಿ ಪೆಟ್ರೋಲ್‌ ದರವು 34 ಬಾರಿ ಮತ್ತು ಡೀಸೆಲ್‌ ದರವು 33 ಬಾರಿ ಹೆಚ್ಚಾದಂತಾಗಿದೆ.

ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಪೆಟ್ರೋಲ್‌ ದರವು ₹ 100.15ರಷ್ಟಾಗಿದ್ದು, ಡೀಸೆಲ್‌ ದರ ₹ 91.55ಕ್ಕೆ ತಲುಪಿದೆ. ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು–ಕಾಶ್ಮೀರ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ, ಪಂಜಾಬ್‌ ಮತ್ತು ಲಡಾಖ್‌ನಲ್ಲಿ ಪೆಟ್ರೋಲ್‌ ದರವು ಈಗಾಗಲೇ ಲೀಟರಿಗೆ ₹ 100ರ ಗಡಿ ದಾಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು