ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೂ ₹ 100ರ ಗಡಿ ದಾಟಿದ ಡೀಸೆಲ್‌

Last Updated 11 ಅಕ್ಟೋಬರ್ 2021, 10:26 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಏಳನೇ ದಿನವೂ ಇಂಧನ ದರ ಹೆಚ್ಚಿಸಿವೆ. ಇದರಿಂದಾಗಿಡೀಸೆಲ್‌ ದರವು ಲೀಟರಿಗೆ ₹ 100ರ ಗಡಿ ದಾಟಿರುವ ರಾಜ್ಯಗಳ ಸಾಲಿಗೆ ಕರ್ನಾಟಕ ಮತ್ತು ಕೇರಳವೂ ಸೇರಿಕೊಂಡಿವೆ.

ಸೋಮವಾರ ಪೆಟ್ರೋಲ್‌ ದರ ಲೀಟರಿಗೆ 30 ಪೈಸೆ ಮತ್ತು ಡೀಸೆಲ್‌ ದರ ಲೀಟರಿಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ಕಂಪನಿಗಳು ದೇಶದಲ್ಲಿ ಇಂಧನ ದರ ಹೆಚ್ಚಿಸುತ್ತಿವೆ.

ಎಚ್‌ಪಿಸಿಎಲ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ದಾವಣಗೆರೆಯಲ್ಲಿ ಡೀಸೆಲ್‌ ದರ ಲೀಟರಿಗೆ ₹ 100.34ರಷ್ಟಾಗಿದೆ. ಪೆಟ್ರೋಲ್‌ ದರ ₹ 109.79ರಷ್ಟಿದೆ. ಶಿವಮೊಗ್ಗದಲ್ಲಿ ಡೀಸೆಲ್‌ ದರ ಲೀಟರಿಗೆ ₹100.12ಕ್ಕೆ ಏರಿಕೆ ಆಗಿದೆ. ಪೆಟ್ರೋಲ್‌ ದರ ಲೀಟರಿಗೆ ₹ 109.51ರಷ್ಟಿದೆ. ಬೆಂಗಳೂರಿನಲ್ಲಿ ಡೀಸೆಲ್‌ ದರವು ₹ 98.85 ಮತ್ತು ಪೆಟ್ರೋಲ್‌ ದರವು ₹ 108.04ಕ್ಕೆ ಏರಿಕೆ ಆಗಿದೆ.

ಒಡಿಶಾ, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಲೇಹ್‌ನಲ್ಲಿ ಈಗಾಗಲೇ ಡೀಸೆಲ್‌ ದರ ₹ 100ನ್ನು ದಾಟಿ ಮಾರಾಟ ಆಗುತ್ತಿದೆ.

ಸೆಪ್ಟೆಂಬರ್‌ 28ರಿಂದ ಇಲ್ಲಿಯವರೆಗೆ ಪೆಟ್ರೋಲ್ ದರವು ಲೀಟರಿಗೆ ₹ 4.35ರಷ್ಟು ಮತ್ತು ಸೆಪ್ಟಂಬರ್‌ 24ರಿಂದ ಇಲ್ಲಿಯವರೆಗೆ ಡೀಸೆಲ್‌ ದರವು ಲೀಟರಿಗೆ ₹ 3.25ರಷ್ಟು ಹೆಚ್ಚಳ ಆದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT