ಭಾನುವಾರ, ನವೆಂಬರ್ 29, 2020
20 °C

ಡೀಸೆಲ್‌ ಮಾರಾಟ ಶೇ 5ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಕ್ಟೋಬರ್‌ನಲ್ಲಿ ಕೋವಿಡ್‌–19 ಪೂರ್ವದ ಸ್ಥಿತಿ ತಲುಪಿದ್ದ ಡೀಸೆಲ್‌ ಮಾರಾಟ ಪ್ರಮಾಣವು ನವೆಂಬರ್‌ 1ರಿಂದ 15ರವರೆಗಿನ ಅವಧಿಯಲ್ಲಿ ಇಳಿಕೆ ಕಂಡಿದೆ.

ನವೆಂಬರ್‌ 1ರಿಂದ 15ರವರೆಗೆ 28.6 ಲಕ್ಷ ಟನ್‌ ಡೀಸೆಲ್‌ ಮಾರಾಟ ಆಗಿದೆ. 2019ರ ಇದೇ ಅವಧಿಯಲ್ಲಿ 30.1 ಲಕ್ಷ ಟನ್‌ ಡೀಸೆಲ್ ಮಾರಾಟವಾಗಿತ್ತು. ಆಗಿನ ಮಾರಾಟಕ್ಕೆ ಹೋಲಿಸಿದರೆ, ಈ ಬಾರಿಯ ಮಾರಾಟದಲ್ಲಿ ಶೇ 5ರಷ್ಟು ಇಳಿಕೆ ಆದಂತಾಗಿದೆ. ಅಕ್ಟೋಬರ್‌ 1ರಿಂದ 15ರವರೆಗೆ ಮಾರಾಟವಾಗಿದ್ದ 26.5 ಲಕ್ಷ ಟನ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಮಾರಾಟವು ಶೇ 7ರಷ್ಟು ಹೆಚ್ಚಾಗಿದೆ.

ಪೆಟ್ರೋಲ್‌ ಮಾರಾಟ ಹೆಚ್ಚಳ: ಪೆಟ್ರೋಲ್‌ ಮಾರಾಟವು 10.2 ಲಕ್ಷ ಟನ್‌ಗಳಿಂದ 10.30 ಲಕ್ಷ ಟನ್‌ಗಳಿಗೆ ಅಲ್ಪ ಏರಿಕೆಯಾಗಿದೆ. ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ) ಮಾರಾಟ ಈ ವರ್ಷದಲ್ಲಿ ಇದೇ ಮೊದಲಿಗೆ ಶೇ 2ರಷ್ಟು ಇಳಿಕೆ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು