ಸೋಮವಾರ, ಸೆಪ್ಟೆಂಬರ್ 27, 2021
22 °C

ಡಿಜಿಟಲ್ ಕರೆನ್ಸಿ ಮಾದರಿ ವರ್ಷಾಂತ್ಯಕ್ಕೆ ಸಿದ್ಧ?

ಪಿಟಿಐ Updated:

ಅಕ್ಷರ ಗಾತ್ರ : | |

REUTERS

ಮುಂಬೈ: ಡಿಜಿಟಲ್‌ ಕರೆನ್ಸಿಯು ಯಾವ ರೀತಿಯಲ್ಲಿ ಕೆಲಸ ಮಾಡಲಿದೆ ಎಂಬುದು ವರ್ಷಾಂತ್ಯದ ಹೊತ್ತಿಗೆ ಸ್ಪಷ್ಟವಾಗುವ ಸಾಧ್ಯತೆ ಇದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ. ರವಿ ಶಂಕರ್ ತಿಳಿಸಿದರು.

ಭಾರತವು ಡಿಜಿಟಲ್ ಕರೆನ್ಸಿಗಳನ್ನು ಹಂತ ಹಂತವಾಗಿ ಚಲಾವಣೆಗೆ ಬಿಡುವ ಬಗ್ಗೆ ಆಲೋಚನೆ ನಡೆಸಿದೆ ಎಂದು ಶಂಕರ್ ಅವರು ಜುಲೈ 22ರಂದು ಮಾಡಿದ ಭಾಷಣದಲ್ಲಿ ಹೇಳಿದ್ದರು. ಚೀನಾ ದೇಶವು ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ಬಳಕೆ ಆರಂಭಿಸಿದೆ, ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಅಮೆರಿಕದ ಫೆಡರಲ್‌ ರಿಸರ್ವ್‌ ಕೂಡ ಡಿಜಿಟಲ್ ಕರೆನ್ಸಿಯ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿವೆ.

‘ಭಾರತದಲ್ಲಿ ಡಿಜಿಟಲ್ ಕರೆನ್ಸಿ ಯಾವಾಗಿನಿಂದ ಚಲಾವಣೆಗೆ ಬರಬಹುದು ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ’ ಎಂದು ಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು