ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳ್ಳಸಾಗಣೆ: ಈ ಆರ್ಥಿಕ ವರ್ಷದಲ್ಲಿ ₹1,658 ಕೆ.ಜಿ ಚಿನ್ನ ಜಪ್ತಿ

Published 20 ಜೂನ್ 2024, 15:22 IST
Last Updated 20 ಜೂನ್ 2024, 15:22 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ₹3,500 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಈ ಪೈಕಿ ಮಾದಕ ವಸ್ತುಗಳು ಮತ್ತು ಚಿನ್ನದ ಪಾಲು ಹೆಚ್ಚಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಪ್ರಧಾನ ಮಹಾ ನಿರ್ದೇಶಕ ಮೋಹನ್‌ ಕುಮಾರ್ ಸಿಂಗ್‌ ಹೇಳಿದ್ದಾರೆ.

ಎಫ್‌ಐಸಿಸಿಐನಿಂದ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಒಳನುಸುಳುವಿಕೆಯ ಜಾಲ ಹಾಗೂ ಕಳ್ಳಸಾಗಣೆಗೆ ಕಡಿವಾಣ ಹಾಕುವುದು ಸವಾಲಾಗಿದೆ. ಮಾದಕ ವಸ್ತುಗಳು ಹಾಗೂ ನಿಷೇಧಿತ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗುವ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಕೊರಿಯರ್‌ ಮತ್ತು ಅಂಚೆ ಮೂಲಕವೂ ತರಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದರು.

ಒಟ್ಟು 623 ಕಳ್ಳಸಾಗಣೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ದಿನವೊಂದಕ್ಕೆ ಸರಾಸರಿ 2 ಪ್ರಕರಣಗಳನ್ನು ಪತ್ತೆ ಹಚ್ಚಿದಂತಾಗುತ್ತದೆ. 1,658 ಕೆ.ಜಿ ಚಿನ್ನ ಜಪ್ತಿ ಮಾಡಲಾಗಿದೆ. 2022–23ನೇ ಸಾಲಿಗೆ ಹೋಲಿಸಿದರೆ ಚಿನ್ನ ಜಪ್ತಿಯಲ್ಲಿ ಶೇ 35ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.

ವಿದೇಶಿ ಸಿಗರೇಟ್‌, ರಕ್ತ ಚಂದನ, ಖೋಟಾ ನೋಟು, ವಿದೇಶಿ ಕರೆನ್ಸಿ ಹಾಗೂ ವನ್ಯಜೀವಿ ಉತ್ಪನ್ನಗಳ ಕಳ್ಳಸಾಗಣೆ ತಡೆಗೆ ಕ್ರಮವಹಿಸಲಾಗಿದೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT