ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಮೆಣಸಿನಕಾಯಿ | ಮೊದಲ ಬಾರಿಗೆ 1.5 ಲಕ್ಷ ಚೀಲಕ್ಕಿಂತ ಹೆಚ್ಚು ಆವಕ

Published 22 ಜನವರಿ 2024, 18:28 IST
Last Updated 22 ಜನವರಿ 2024, 18:28 IST
ಅಕ್ಷರ ಗಾತ್ರ

ಬ್ಯಾಡಗಿ (ಹಾವೇರಿ ಜಿಲ್ಲೆ): ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ 42,122 ಕ್ವಿಂಟಲ್‌ (1,68,489 ಚೀಲ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಹೆಚ್ಚಳವಾಗಿದೆ.

ಪ್ರಸಕ್ತ ಹಂಗಾಮಿನಲ್ಲಿ ಮೊದಲ ಬಾರಿಗೆ 1.50 ಲಕ್ಷಕ್ಕೂ ಹೆಚ್ಚು ಚೀಲ ಆವಕವಾಗಿದೆ. ಹಿಂದಿನ ವಾರ ಮಾರುಕಟ್ಟೆಗೆ 28,506 ಕ್ವಿಂಟಲ್‌ (1,14,026 ಚೀಲ) ಆವಕವಾಗಿತ್ತು. 

ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹61,999ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು ಸ್ಥಿರತೆ ಕಾಯ್ದುಕೊಂಡಿದೆ. ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹50,189ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು, ಕಳೆದ ಗುರುವಾರಕ್ಕಿಂತ ಕ್ವಿಂಟಲ್‌ಗೆ ₹4 ಸಾವಿರ ಇಳಿಕೆ ಕಂಡಿದೆ. ಗುಂಟೂರು ತಳಿ ಮೆಣಸಿನಕಾಯಿ ₹18,129ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು, ಸ್ಥಿರತೆ ಕಾಯ್ದುಕೊಂಡಿದೆ.

ವರ್ತಕರಿಂದ ದಾಸೋಹ

ಸೋಮವಾರ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಪ್ರಾಂಗಣದಲ್ಲಿ ವರ್ತಕರು ಬೆಳಿಗ್ಗೆ 8 ರಿಂದ ಮಧ್ಯಾಹ್ನ12ವರೆಗೆ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಬಳಿಕ ಸಿದ್ದೇಶ್ವರ ದೇವಸ್ಥಾನದಿಂದ ಶ್ರೀರಾಮನ 8 ಅಡಿ ಎತ್ತರದ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಮಾರುಕಟ್ಟೆಯ ಬೃಹ್ಮಸ್ಥಾನದಲ್ಲಿ ಶ್ರೀರಾಮ ದೇವರ ಕಟೌಟ್‌ ಪ್ರತಿಷ್ಠಾಪಿಸಿ ಹಣಹೋಮ, ಸುದರ್ಶನ ಹೋಮ, ರಾಮತಾರಕ ಹೋಮ, ರಾಮರಕ್ಷಾತಾರಕ ಮಂತ್ರ ಮತ್ತು ರಾಮರಕ್ಷಾಸ್ತೋತ್ರ ಪಠಣ ನಡೆಯಿತು.

ಮಹಾಮಂಗಳಾರತಿ ಬಳಿಕ, ಸಮಸ್ತ ರೈತರಿಗೆ, ಪೇಟೆ ಕಾರ್ಯಕರ್ತರಿಗೆ, ಹಮಾಲರಿಗೆ ಹಾಗೂ ಮಹಿಳಾ ಕೂಲಿ ಕಾರ್ಮಿಕರಿಗೆ ಪ್ರಸಾದ ವಿತರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT