‘ಇ–ಹಬ್’ ಜಾಲಕ್ಕೆ ಅದಾನಿ ಟೋಟಲ್ ಎನರ್ಜೀಸ್ ಲಿಮಿಟೆಡ್ (ಎಟಿಇಎಲ್), ಬಿಪಿಸಿಎಲ್, ಚಾರ್ಜ್‌ಝೋನ್, ಗ್ಲಿಡ, ಎಚ್‌ಪಿಸಿಎಲ್, ಜಿಯೊ–ಬಿಪಿ, ಶೆಲ್, ಸ್ಟ್ಯಾಟಿಕ್, ಜಿಯೊನ್ ಸಹಿತ ಪ್ರಮುಖ ಪೂರೈಕೆದಾರ ಕಂಪನಿಗಳನ್ನು ಪಾಲುದಾರರನ್ನಾಗಿ ಮಾಡುವ ಮೂಲಕ ದೇಶದಾದ್ಯಂತ ಈ ಜಾಲವನ್ನು (ನೆಟ್‌ವರ್ಕ್) ವಿಸ್ತರಿಸುವ ಗುರಿಯನ್ನು ಎಂ.ಜಿ. ಮೋಟಾರ್ಸ್ ಇಂಡಿಯಾ ಹೊಂದಿದೆ.