ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾನ್‌ ಎಲೆಕ್ಟ್ರಿಕ್‌ನಿಂದ ಇ–ಬೈಕ್‌ ಬಿಡುಗಡೆ

Last Updated 22 ಜನವರಿ 2022, 11:03 IST
ಅಕ್ಷರ ಗಾತ್ರ

ಕೊಚ್ಚಿ: ವಾನ್‌ (ವಿಎಎಎನ್‌) ಎಲೆಕ್ಟ್ರಾನಿಕ್‌ ಮೊಟೊ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ದೇಶದ ಮಾರುಕಟ್ಟೆಗೆ ಅರ್ಬನ್‌ ಸ್ಪೋರ್ಟ್‌ ಎನ್ನುವ ಇ–ಬೈಕ್‌ ಬಿಡುಗಡೆ ಮಾಡಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ವರ್ಚುವಲ್‌ ವೇದಿಕೆಯ ಮೂಲಕ ಶುಕ್ರವಾರ ಇ–ಬೈಕ್‌ ಬಿಡುಗಡೆ ಮಾಡಿದ್ದಾರೆ.

ಅರ್ಬನ್‌ ಸ್ಪೋರ್ಟ್‌ ಮತ್ತು ಅರ್ಬನ್‌ ಸ್ಪೋರ್ಟ್‌ ಪ್ರೊ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. ಬೆಲೆ ಕ್ರಮವಾಗಿ ₹ 59,999 ಮತ್ತು ₹ 69,999 ಇದೆ. ಮೊದಲಿಗೆ ಕೊಚ್ಚಿಯಲ್ಲಿ ಮಾರಾಟ ಆರಂಭ ಆಗಲಿದ್ದು, ಆ ಬಳಿಕ ಬೆಂಗಳೂರು, ಗೋವಾ, ಮುಂಬೈ, ಹೈದರಾಬಾದ್‌ ಮತ್ತು ದೆಹಲಿಯಲ್ಲಿ ಮಾರಾಟ ಆರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಕಂಪನಿಯ ಪ್ರಕಾರ, ಎಲೆಕ್ಟ್ರಿಕ್‌ ವ್ಯವಸ್ಥೆಯಲ್ಲಿ ಪ್ರತಿ ಗಂಟೆಗೆ 25 ಕಿಲೋ ಮೀಟರ್ ಹಾಗೂ ಪೆಡಲ್‌ ಬಳಸಿದರೆ ಪ್ರತಿ ಗಂಟೆಗೆ 60 ಕಿಲೋ ಮೀಟರ್‌ ಚಲಿಸಬಹುದು.

ಬ್ಯಾಟರಿ ಪೂರ್ತಿ ಚಾರ್ಜ್‌ ಆಗಲು ನಾಲ್ಕು ಗಂಟೆ ಬೇಕಾಗಲಿದ್ದು, ಅರ್ಧ ಯುನಿಟ್‌ ವಿದ್ಯುತ್‌ ಸಾಕಾಗುತ್ತದೆ. ಇದಕ್ಕೆ ₹ 4 ರಿಂದ ₹ 5 ರವರೆಗೆ ವೆಚ್ಚವಾಗುತ್ತದೆ. ಒಮ್ಮೆ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಿದರೆ 50–60 ಕಿಲೋ ಮೀಟರ್‌ ದೂರ ಕ್ರಮಿಸಬಹುದು ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT