ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿತಾಯ ಖಾತೆ ಸುಲಭ ವಿಧಾನ

Last Updated 23 ಜೂನ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌ ಪಿಡುಗಿನ ಕಾರಣಕ್ಕೆ ಸುರಕ್ಷತೆಗೆ ಆದ್ಯತೆ ನೀಡುತ್ತಿರುವ ಬ್ಯಾಂಕ್‌ಗಳು, ಗ್ರಾಹಕರ ಜತೆ ನಡೆಸುವ ಸಂವಹನದ ಸ್ವರೂಪವನ್ನೇ ಬದಲಿಸುತ್ತಿವೆ. ಹೊಸ ಡಿಜಿಟಲ್‌ ಸೌಲಭ್ಯ ನೀಡಲು ಆದ್ಯತೆ ನೀಡುತ್ತಿವೆ. ಉಳಿತಾಯ ಖಾತೆ ಆರಂಭಿಸಲೂ ಆನ್‌ಲೈನ್‌ ಸೌಲಭ್ಯ ಕಲ್ಪಿಸುತ್ತಿವೆ.

ಎಸ್‌ಬಿಐ; ಆಧಾರ್‌ ಬಳಸಿ ಉಳಿತಾಯ ಖಾತೆ: ಆಧಾರ್‌ ಬಳಸಿ ಬ್ಯಾಂಕ್‌ ಶಾಖೆಗಳಲ್ಲಿ ಉಳಿತಾಯ ಖಾತೆ ಆರಂಭಿಸುವ ಸೇವೆಗೆಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮರುಚಾಲನೆ ನೀಡಿದೆ. ಗ್ರಾಹಕರಿಗೆ ಡಿಜಿಟಲ್‌ ಬ್ಯಾಂಕಿಂಗ್‌ ಸೇವೆಯ ಸೌಲಭ್ಯ ವಿಸ್ತರಿಸಲು ಈ ಕ್ರಮ ಕೈಗೊಂಡಿದೆ. ಗ್ರಾಹಕರು ಬ್ಯಾಂಕ್‌ನ ಯೊನೊ ಸೌಲಭ್ಯ ಬಳಸಿಕೊಂಡು ಆಧಾರ್‌ ಆಧರಿಸಿ ತಕ್ಷಣಕ್ಕೆ ಉಳಿತಾಯ ಖಾತೆ ಆರಂಭಿಸುವ ಸೌಲಭ್ಯ ಇದಾಗಿದೆ.

ಈ ಪ್ರಕ್ರಿಯೆಯು ಸಂಪೂರ್ಣ ಕಾಗದರಹಿತವಾಗಿರುತ್ತದೆ. ಪ್ಯಾನ್‌ ಮತ್ತು ಆಧಾರ್ ಸಂಖ್ಯೆ ಬಳಸಿ ಗ್ರಾಹಕರು ಖಾತೆ ತೆರೆಯಬಹುದು. ಗ್ರಾಹಕರು ಬ್ಯಾಂಕ್‌ ಶಾಖೆಗೆ ತೆರಳದೆ ಉಳಿತಾಯ ಖಾತೆ ಆರಂಭಿಸಬಹುದು. ಗ್ರಾಹಕರಿಗೆ ರೂಪೆ ಎಟಿಎಂ – ಡೆಬಿಟ್‌ ಕಾರ್ಡ್‌ ನೀಡಲಾಗುವುದು.

ಗ್ರಾಹಕರು ಮೊದಲು ತಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ನ ಯೊನೊ (Yono) ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಪ್ಯಾನ್‌ ಮತ್ತು ಆಧಾರ್‌ ವಿವರ ನೀಡಬೇಕು. ಮೊಬೈಲ್‌ಗೆ ಬರುವ ಒಟಿಪಿ ಸಲ್ಲಿಸಿ ಇತರ ವಿವರಗಳನ್ನು ಭರ್ತಿ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಉಳಿತಾಯ ಖಾತೆ ಕಾರ್ಯಾರಂಭ ಮಾಡಲಿದೆ. ತಕ್ಷಣದಿಂದಲೇ ವಹಿ ವಾಟು ಆರಂಭಿಸಬಹುದು. ಒಂದು ವರ್ಷದ ಒಳಗೆ ಗ್ರಾಹಕರು ತಮ್ಮ ಮನೆ ಸಮೀಪದ ಬ್ಯಾಂಕ್‌ ಶಾಖೆಗೆ ಭೇಟಿ ಕೊಟ್ಟು ‘ತಿಳಿಯಿರಿ ನಿಮ್ಮ ಗ್ರಾಹಕರು’ (ಕೆವೈಸಿ) ವಿವರಗಳನ್ನು ನೀಡಬೇಕು.

ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್: ವಿಡಿಯೊ ಕೆವೈಸಿ

ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್, ಆನ್‌ಲೈನ್ ಉಳಿತಾಯ ಖಾತೆ ತೆರೆಯಲು ವಿಡಿಯೊ ಕೆವೈಸಿ ವ್ಯವಸ್ಥೆ ಪರಿಚಯಿಸಿದೆ. ಡಿಜಿಟಲ್ ವಿಧಾನದಲ್ಲಿ ಉಳಿತಾಯ ಖಾತೆ ತೆರೆಯುವ ಸೌಲಭ್ಯದಿಂದಾಗಿ, 2 ನಿಮಿಷದಲ್ಲಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಡಿಜಿಟಲ್ ಸೌಲಭ್ಯವು ಗ್ರಾಹಕರಿಗೆ ಮನೆಯಲ್ಲೇ ಬ್ಯಾಂಕ್‌ ಶಾಖೆ ರೀತಿಯ ಅನುಭವ ಒದಗಿಸುತ್ತದೆ. ಸಂಪರ್ಕರಹಿತ ಸೌಲಭ್ಯದಿಂದಾಗಿ ಬ್ಯಾಂಕ್ ಮತ್ತು ಗ್ರಾಹಕರ ಮಧ್ಯೆ ಭೌತಿಕ ಸಂವಹನವೇ ಇಲ್ಲದೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT