ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಿರ್‌ಎಕ್ಸ್‌ನ ₹ 64 ಕೋಟಿ ಮೊತ್ತದ ಬ್ಯಾಂಕ್ ಠೇವಣಿ ನಿರ್ಬಂಧಿಸಿದ ಇ.ಡಿ

Last Updated 5 ಆಗಸ್ಟ್ 2022, 14:33 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಪ್ಟೊ ಕರೆನ್ಸಿ ವಹಿವಾಟುಕಂಪನಿ ವಾಜಿರ್‌ಎಕ್ಸ್‌ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣ ತನಿಖೆಯ ಭಾಗವಾಗಿ ₹ 64.67 ಕೋಟಿ ಮೊತ್ತದ ಬ್ಯಾಂಕ್‌ ಠೇವಣಿಗಳನ್ನು ನಿರ್ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ತಿಳಿಸಿದೆ.

ವಾಜಿರ್‌ಎಕ್ಸ್‌ ಒಡೆತನದ ಝನ್ಮೈ ಲ್ಯಾಬ್‌ ಪ್ರೈವೇಟ್‌ ಲಿಮಿಡೆಟ್‌ ನಿರ್ದೇಶಕರ ನಿವಾಸದ ಮೇಲೆ ಹೈದರಾಬಾದ್‌ನಲ್ಲಿ ಆಗಸ್ಟ್‌ 3ರಂದು ದಾಳಿ ನಡೆಸಿತ್ತು.

ಕ್ರಿಪ್ಟೊ ವಹಿವಾಟು ವಿರುದ್ಧದ ತನಿಖೆಯು, ದೇಶದಲ್ಲಿ ಕಾರ್ಯಾಚರಿಸುತ್ತಿರುವ ಚೀನಾ ಮೂಲದ ಸಾಲ ನೀಡುವ ಆ್ಯಪ್‌ಗಳಿಗೆ (ಮೊಬೈಲ್‌ ಅಪ್ಲಿಕೇಷನ್‌ಗಳಿಗೆ) ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದೆ.

ವಾಜಿರ್‌ಎಕ್ಸ್‌, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು (ಎಫ್‌ಇಎಂಎ) ಉಲ್ಲಂಘಿಸಿದೆ ಎಂದು ಇ.ಡಿ ಕಳೆದ ವರ್ಷವೇ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT