ಅಡುಗೆ ಎಣ್ಣೆ ದರ ಪ್ರತಿ ಕೆ.ಜಿಗೆ ₹3 ರಿಂದ ₹4ರವರೆಗೆ ಇಳಿಕೆ ಸಾಧ್ಯತೆ: ಎಸ್ಇಎ

ನವದೆಹಲಿ: ಅಡುಗೆ ಎಣ್ಣೆ ದರವು ಮುಂಬರುವ ತಿಂಗಳುಗಳಲ್ಲಿ ಪ್ರತಿ ಕೆ.ಜಿಗೆ ₹ 3 ರಿಂದ ₹ 4ರವರೆಗೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಸಾಲ್ವೆಂಟ್ ಎಕ್ಸ್ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್ಇಎ) ಹೇಳಿದೆ.
ಎಣ್ಣೆಕಾಳುಗಳ ದೇಶಿ ಉತ್ಪಾದನೆ ಗರಿಷ್ಠ ಮಟ್ಟದಲ್ಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರವು ಇಳಿಮುಖವಾಗಿದೆ. ಈ ಕಾರಣಗಳಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ದರವು ಇನ್ನಷ್ಟು ಇಳಿಕೆ ಆಗುವ ಅಂದಾಜು ಮಾಡಲಾಗಿದೆ ಎಂದು ಅದು ತಿಳಿಸಿದೆ.
ಕೇಂದ್ರ ಸರ್ಕಾರವು ಆಮದು ಸುಂಕ ತಗ್ಗಿಸಿರುವುದರಿಂದ ಅಡುಗೆ ಎಣ್ಣೆ ದರವು ಒಂದು ತಿಂಗಳಿನಲ್ಲಿ ಕೆ.ಜಿಗೆ ₹ 8 ರಿಂದ ₹ 10ರವರೆಗೆ ಇಳಿಕೆ ಆಗಿದೆ ಎಂದು ಮಾಹಿತಿ ನೀಡಿದೆ.
ದೇಶದಲ್ಲಿ ಅಡುಗೆ ಎಣ್ಣೆಗಳ ವಾರ್ಷಿಕ ಬೇಡಿಕೆ 2.2 ಕೋಟಿ ಟನ್ಗಳಿಂದ 2.25 ಕೋಟಿ ಟನ್ಗಳಷ್ಟಿದೆ. ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಮೂಡಿಸಲು 1.3 ಕೋಟಿ ಟನ್ಗಳಿಂದ 1.5 ಕೋಟಿ ಟನ್ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.