ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಯಜ್‌ ಕಾಲುವೆ ಪ್ರಾಧಿಕಾರ 8 ತಿಂಗಳಲ್ಲಿ ಸಂಗ್ರಹಿಸಿದ ಆದಾಯ ಎಷ್ಟು ಗೊತ್ತೇ? 

Last Updated 21 ಸೆಪ್ಟೆಂಬರ್ 2021, 11:42 IST
ಅಕ್ಷರ ಗಾತ್ರ

ಇಸ್ಮಾಯಿಲಿಯಾ(ಈಜಿಪ್ಟ್‌): ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಈಜಿಪ್ಟ್‌ನ ಸೂಯಜ್ ಕಾಲುವೆಯ ಆದಾಯ ಶೇ 11.6ರಷ್ಟು ಏರಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಎಂಟು ತಿಂಗಳಲ್ಲಿಸೂಯಜ್‌ ಕಾಲುವೆಯು 4.09 ಬಿಲಿಯನ್‌ಡಾಲರ್‌ (30,127 ಕೋಟಿ ) ಆದಾಯ ಸಂಗ್ರಹಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 3.666 ಬಿಲಿಯನ್ ಡಾಲರ್‌ (27,003 ಕೋಟಿ) ಸಂಗ್ರಹವಾಗಿತ್ತು ಎಂದು ಕಾಲುವೆ ಪ್ರಾಧಿಕಾರವು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

200 ಕಿಲೋಮೀಟರ್ ಉದ್ದವಿದ್ದು ಕೇವಲ 300 ಮೀಟರ್ ಅಗಲವಿರುವ ಸೂಯಜ್‌ ಕಾಲುವೆ ಕೆಂಪು ಸಮುದ್ರ ಹಾಗೂ ಮೆಡಿಟರೇನಿಯನ್ ಸಮುದ್ರಗಳನ್ನು ಜೋಡಿಸುತ್ತದೆ. ಹೀಗಾಗಿ ಏಷ್ಯಾ ಹಾಗೂ ಯೂರೋಪ್ ಖಂಡಗಳ ನಡುವೆ ಇದು ಒಂದು ‘ಕಿರು ದಾರಿ (ಶಾರ್ಟ್ ಕಟ್)’ ಅನ್ನು ನಿರ್ಮಿಸಿದೆ. ಸಾಗರಗಳ ಮೂಲಕ ಸಾಗುವ ಜಗತ್ತಿನ ವಾಣಿಜ್ಯ ವಹಿವಾಟಿನ ಶೇಕಡಾ 13ರಷ್ಟು ಭಾಗ ಸೂಯಜ್‌ ಕಾಲುವೆಯ ಮೂಲಕ ಸಾಗುತ್ತದೆ.

ಇವುಗಳನ್ನೂಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT