ಗುರುವಾರ , ಜೂನ್ 4, 2020
27 °C

ಪಿಎಫ್‌: ಉದ್ಯೋಗಿಗಳು ಶೇ10ಕ್ಕಿಂತಹೆಚ್ಚು ವಂತಿಗೆ ನೀಡಲು ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ  (ಪಿಎಫ್‌) ಖಾತೆಗೆ ಶೇ 10ಕ್ಕಿಂತಲೂ ಹೆಚ್ಚಿನ ವಂತಿಗೆಯನ್ನು ನೀಡಬಹುದು ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

 ಮುಂದಿನ ಮೂರು ತಿಂಗಳಿಗೆ ಪಿಎಫ್‌ಗೆ ಶಾಸನಬದ್ಧವಾಗಿ ವಂತಿಗೆ ಸಲ್ಲಿಸುವ ಮೂಲ ವೇತನದ ಶೇ 10ಕ್ಕಿಂತಲೂ ಹೆಚ್ಚಿಗೆ ನೀಡುವ ಆಯ್ಕೆಯನ್ನು ಉದ್ಯೋಗಿಗಳಿಗೆ ನೀಡಲಾಗಿದೆ.  ಈ ನಿಯಮವು ಮಾಲೀಕರಿಗೆ ಅನ್ವಯವಾಗದು.

ಉದ್ಯೋಗಿ ಮತ್ತು ಉದ್ಯೋಗದಾತರ ಪಿಎಫ್‌ ವಂತಿಗೆಯನ್ನು ಮೇ, ಜೂನ್‌ ಮತ್ತು ಜುಲೈ ಸಂಬಳದ ಶೇ 12ಕ್ಕೆ ಬದಲಾಗಿ ಶೇ 10ಕ್ಕಿ ಇಳಿಕೆ ಮಾಡಿರುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಳೆದ ವಾರ ಬಗ್ಗೆ ಘೋಷಿಸಿದ್ದರು. ಇದರಿಂದ ಉದ್ಯೋಗಿಗಳು ಮನೆಗೆ ಕೊಂಡೊಯ್ಯುವ ಸಂಬಳ ಹೆಚ್ಚಳವಾಗಲಿದೆ ಎಂದು ಹೇಳಿದ್ದರು.

ಇದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿ ಇರುವ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು